ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ: ದಿನಕ್ಕೆ 10 ರೈಲುಗಳು – ಟಿಕೆಟ್ ದರವೂ 10 ರೂ !

Team Newsnap
1 Min Read

ಬೆಂಗಳೂರು ಕೆಎಸ್‍ಆರ್ (ಕೇಂದ್ರ) ನಿಂದ ದೇವನಹಳ್ಳಿಗೆ ಡೆಮೋ ರೈಲು ಸೇವೆ ಆರಂಭವಾಗಿದೆ.

ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಉಪನಗರ ರೈಲು ಹೊರಟಿದೆ.

ಟಿಕೆಟ್ ದರ 10 ರು.

ಟಿಕೆಟ್ ದರ ಕೂಡ ಕೇವಲ 10 ರು. ನೀಡಿ ರೈಲಿನಿಂದ ಏರ್ಪೋರ್ಟ್ ಹೋಗುವ ಅವಕಾಶ. ಟ್ರಾಫಿಕ್ ಸಮಸ್ಯೆ ಗಳೇ ಇಲ್ಲ.

ಸಂಸದ ಪಿ ಸಿ ಮೋಹನ್ ಪ್ರಯಾಣ :

ಇಂದು ಬೆಳಗಿನ ಜಾವ 4.45ಕ್ಕೆ ಏರ್‌ಪೋರ್ಟ್‌ ನತ್ತ ಮಿದಲ ರೈಲು ಪ್ರಯಾಣ ಆರಂಭವಾಗಿದೆ. ಡೆಮೋ ರೈಲಿನಲ್ಲಿ ಸಂಸದ ಪಿ.ಸಿ ಮೋಹನ್ , ರೈಲ್ವೆ ಅಧಿಕಾರಗಳ ಜೊತೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಉಚಿತ ಬಸ್ ವ್ಯವಸ್ಥೆ:

ವಿಮಾನ ನಿಲ್ದಾಣಕ್ಕೆ 2 ಕಿ.ಮೀ ದೂರದಲ್ಲಿ ಹಾಲ್ಟ್ ಸ್ಟೇಷನ್ ಇದೆ. ಇನ್ನು ದೇವನಹಳ್ಳಿ ರೈಲು ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಇದೆ. ರೈಲಿನಲ್ಲಿ ಪ್ರಯಾಣ ಮಾಡಿ ದೇವನಹಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣಿಕರು ತೆರಳಿದ್ದಾರೆ.

ದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿ ಏರ್‌ಪೋರ್ಟ್‌ ಇದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಮಾನ ಟರ್ಮಿನಲ್ ಕಡೆ ಬಸ್ ಸಂಚಾರ ವ್ಯವಸ್ಥೆ ಕೂಡ ಇದೆ. ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

Share This Article
Leave a comment