ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ – ನಾಲ್ವರ ದುರಂತ ಸಾವು : ನಾಲ್ವರ ಸ್ಥಿತಿ ಚಿಂತಾಜನಕ

Team Newsnap
1 Min Read

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಸರಣಿ ಅಪಘಾತ -ಸ್ಥಳದಲ್ಲೇ ನಾಲ್ವರ ದುರ್ಮರಣ, ನಾಲ್ವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಜರುಗಿದೆ. ಮೊಹಮ್ಮದ್ ಫಾದಿಲ್ (25), ಶಿಲ್ಪಾ (30), ಅಭಿಲಾಶ್ (25) ಮೃತರು. ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಈ ಭೀಕರ ಸರಣಿ ಅಪಘಾತ ನಡೆದಿದ್ದು ನೈಸ್ ರಸ್ತೆಯಲ್ಲಿ. ರಸ್ತೆ ದುರಸ್ತಿ ಕಾರ್ಯದಿಂದ ಟ್ರಾಫಿಕ್ ಜಾಮ್ ಆಗಿತ್ತು. ಹಾಗಾಗಿ ಸ್ಲೋ ಮೂವಿಂಗ್ ಟ್ರಾಫಿಕ್ ಇತ್ತು. ಒಂದರ ಹಿಂದೊಂದು ವಾಹನಗಳು ನಿಂತಿದ್ದವು ಅಗ ಯಮರೂಪಿಯಾಗಿ ಬಂದ ಲಾರಿ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿತ್ತು‌. ಡಿಕ್ಕಿಯ ರಭಸಕ್ಕೆ ಅ ಕಾರು ಮುಂದಿದ್ದ ಟುಯೋಟಾ ಕ್ವಾಲಿಸ್ ಕಾರಿಗೆ ಹಾಗೆ ಪಕ್ಕದಲ್ಲಿದ್ದ ಸ್ವಿಪ್ಟ್ ಕಾರಿಗೆ ಗುದ್ದಿದೆ.

ಕ್ವಾಲಿಸ್ ಕಾರು ಮುಂದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. 2 ಲಾರಿಗಳಿಗೂ ಡಿಕ್ಕಿಯಾಗಿದೆ.
ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ರಸ್ತೆ ಕಡೆ ಹೊರಟಿದ್ದ ವ್ಯಾಗನರ್ ಕಾರಿನಲ್ಲಿ ಇಬ್ಬರು ಪುರುಷರು ಇಬ್ಬರು ಮಹಿಳೆಯರು ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು, ಅ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿತ್ತು..ಅ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು.

ಆ ಕಾರಿನ ಮುಂದೆ ಚಲಿಸುತ್ತಿದ್ದ ಕ್ವಾಲಿಸ್ ಗಾಡಿಯಲ್ಲೂ ಕೂಡ ನಾಲ್ವರೂ ಪ್ರಯಾಣಿಸುತ್ತಿದ್ದ . ಅ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಜನಕವಾಗಿದೆ.. 

ಅವರೆಲ್ಲರನ್ನೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತೊಂದು ಸ್ಪಿಪ್ಟ್ ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಗಿದ್ದು.. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ದುರಂತಕ್ಕೆ ಕಾರಣನಾದ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಕುಮಾರಸ್ವಾಮಿ ಲೇ ಔಟ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

Share This Article
Leave a comment