December 24, 2024

Newsnap Kannada

The World at your finger tips!

police 1

ಮದ್ದೂರಿನ ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ದುರಂತ : ಎಸಿ ಸ್ಪೋಟಗೊಂಡು ಉಪ ಮ್ಯಾನೇಜರ್ ಸಾವು

Spread the love

ಮದ್ದೂರು:

ಮದ್ದೂರಿನ ಕೊಪ್ಪದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟಗೊಂಡು ಡೆಪ್ಯುಟಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ.

ಕೊಪ್ಪದಲ್ಲಿರುವ NSL ಸಕ್ಕರೆ ಕಾರ್ಖಾನೆ ವಿದ್ಯುತ್ ವಿಭಾಗದ ಕಂಟ್ರೋಲ್ ರೂಂನಲ್ಲಿ ಕೆಲಸ ಮಾಡುವಾಗ ಈ ದುರಂತ ಸಂಭವಿಸಿದೆ. ಶಿವಮೊಗ್ಗ ಮೂಲದ ಶ್ರೀಧರ್(48) ಮೃತ ಡೆಪ್ಯುಟಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ.

ಸ್ಫೋಟದ ಬಳಿಕ ರಾಸಾಯನಿಕ ಸೋರಿಕೆಯಿಂದ ಶ್ರೀಧರ್​ ಅಸ್ವಸ್ಥಗೊಂಡಿದ್ದಾರೆ. ಇತರೆ ಸಿಬ್ಬಂದಿಗಳು ಗಮನಿಸಿ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!