ಮಂಡ್ಯ ಉಪ ವಿಭಾಗಕ್ಕೆ ನೂತನ ಎಸಿಯಾಗಿ ಎಂ. ಶಿವಮೂರ್ತಿ ನೇಮಕ

Team Newsnap
1 Min Read

ಮಂಡ್ಯ :

ಮಂಡ್ಯ ವಿಭಾಗಕ್ಕೆ ನೂತನ ಉಪವಿಭಾಗಾಧಿಕಾರಿಯಾಗಿ ಎಂ.ಶಿವಮೂರ್ತಿ ರನ್ನು ಸರ್ಕಾರ ನೇಮಕ ಮಾಡಿದೆ

ಇದುವರೆಗೂ ಪ್ರಭಾರಿ ಉಪವಿಭಾಗಾಧಿಕಾರಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು.

ಇವರ ಸ್ಥಾನಕ್ಕೆ ಎಂ.ಶಿವಮೂರ್ತಿ ರಿಗೆ ಪದೋನ್ನತಿ ನೀಡಿ ಉಪವಿಭಾಗಾಧಿಕಾರಿಯಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎಂ.ಶಿವಮೂರ್ತಿ ಈ ಹಿಂದೆ ಕೆ.ಆರ್.ಪೇಟೆಯಲ್ಲಿ ಮೂರು ವರ್ಷ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅದೇ ರೀತಿನಂಜನಗೂಡಿನಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಿದ್ದಾರೆ‌,

ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ನಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂ.ಶಿವಮೂರ್ತಿ ಅವರಿಗೆ ಪದೋನ್ನತಿ ನೀಡಿ ಸರ್ಕಾರ ಮಂಡ್ಯ ಉಪವಿಭಾಗಾಧಿಕಾರಿಯಾಗಿ
ನೇಮಕ ಮಾಡಿದೆ.

Share This Article
Leave a comment