ಹೊಸಪೇಟೆಯಲ್ಲಿ ದುರಂತ : ಮೂವರು ವಿದ್ಯಾರ್ಥಿಗಳು ನೀರುಪಾಲು -ಮೂವರ ರಕ್ಷಣೆ

Team Newsnap
1 Min Read

ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಕಾಲುವೆಯಲ್ಲಿ ನಡೆದಿದೆ.

ಪ್ರತಿ ವಾರ ರಜೆ ದಿನ ಈಜಲು ನಾಲೆಗೆ ಹೋಗುತ್ತಿದ್ದರು . ಹೊಸಪೇಟೆಯ ವಿಜಯನಗರದ ಪಿಯು ಕಾಲೇಜಿನ 6 ವಿದ್ಯಾರ್ಥಿಗಳು ಕಾಲುವೆಗೆ ಈಜಲು ಹೋಗಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

ಯಶವಂತ್, ಅಂಜಿನಿ, ಗುರುರಾಜ್ ಉಳಿದ ಮೂವರು ವಿದ್ಯಾರ್ಥಿಗಳು ಈಜಿ ದಡ ಸೇರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಹೊಸಪೇಟೆ ಗ್ರಾಮೀಣ ಠಾಣೆ ಪೊಲಿಸರು ಧಾವಿಸಿ, ನೀರುಪಾಲಾದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ವರದಿ : ಮುರುಳೀಧರ್ ನಾಡಿಗೇರ್

Share This Article
Leave a comment