December 26, 2024

Newsnap Kannada

The World at your finger tips!

suicide , crime , death

Tragedy in Doddaballapur: A young man died after falling from a tree ದೊಡ್ಡಬಳ್ಳಾಪುರದಲ್ಲಿ ದುರಂತ : ಮರದಿಂದ ಕೆಳಗೆ ಬಿದ್ದು ಯುವಕ ಸಾವು

ದೊಡ್ಡಬಳ್ಳಾಪುರದಲ್ಲಿ ದುರಂತ : ಮರದಿಂದ ಕೆಳಗೆ ಬಿದ್ದು ಯುವಕ ಸಾವು

Spread the love

ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಸರ್ಕಾರಿ ಪ್ರಾಥಮಿಕ ಶಾಲ ಆವರಣದಲ್ಲಿ ಘಟನೆ ನಡೆದಿದೆ.ಸೈಕಲ್ ಹೊಡೆಯುತ್ತಿದ್ದ ಬಾಲಕನ ಮೇಲೆ ಗೂಳಿ ದಾಳಿ!

ಕರೇನಹಳ್ಳಿಯ ನಾಗೇಂದ್ರಪ್ರಸಾದ್ (25) ಮೃತಪಟ್ಟಿದ್ದಾರೆ, ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಯುವಕ ಮರಕ್ಕೆ ಪಂಚೆಕಟ್ಟಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಪಂಚೆ ಹರಿದು ಯುವಕ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ

ಮೃತನ ಸಂಬಂಧಿಕರು ಸ್ಥಳ ಆಗಮಿಸಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸಮಸ್ಯೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!