February 21, 2026

Newsnap Kannada

The World at your finger tips!

12000

ಬೆಂಗಳೂರಿನಲ್ಲಿ ದುರಂತ : 12 ಸಾವಿರ ರು ಕಳೆದುಕೊಂಡು ಮಗನನ್ನು ಪೆಟ್ರೋಲ್ ಹಾಕಿ ಕೊಂದ ಅಪ್ಪ

Spread the love

ತಂದೆಯೇ ಮಗನನ್ನು ನಿದ೯ಯವಾಗಿ ಸಾಯಿಸಿದನ ಘಟನೆ ಬೆಂಗಳೂರಿನಲ್ಲಿ ಜರುಗಿದೆ, 12 ಸಾವಿರ ರು ಹಣ ಕಳೆದುಕೊಂಡಿದ್ದಕ್ಕೆ ಸ್ವಂತ ಮಗನನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾನೆ.

ಇಂತಹ ಅಮಾನವೀಯ ಘಟನೆಯೊಂದು ಬೆಂಗಳೂರಿನ ಆಜಾದ್ ನಗರದಲ್ಲಿ ಜರುಗಿದೆ. ಸುರೇಂದ್ರ ಎಂಬವರೇ ತಮ್ಮ ಮಗ ಅರ್ಪಿತ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಈ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಕಳೆದ ವಾರ ಅರ್ಪಿತ್ 12 ಸಾವಿರ ರೂ. ಕಳೆದುಕೊಂಡಿದ್ದಕ್ಕೆ ಸುರೇಂದ್ರ ಅವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು ಎನ್ನಲಾಗಿದೆ.

ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನರಳಿ ಇಂದು
ಸಾವನ್ನಪ್ಪಿದ್ದಾನೆ.

error: Content is protected !!