2 ಲಕ್ಷ ರು ಕದಿಯಲು ಹೋದವರಿಗೆ ಸಿಕ್ಕಿದ್ದು 2 ಕೋಟಿ – ಹಣವನ್ನು ದೋಚಿದ್ದ ಇಬ್ಬರ ಬಂಧನ

Team Newsnap
2 Min Read

2 ಲಕ್ಷ ರು ಕಳ್ಳತನ ಮಾಡಲು ಬಂದ ಕಳ್ಳರು 2 ಕೋಟಿ ರು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಜರುಗಿದೆ.

ಕುಮಾರಸ್ವಾಮಿ ಲೇಔಟ್ ನಿವಾಸದಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಸುನೀಲ್, ದಿಲೀಪ್‍ರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಯಲ್ಲಿ ಈ ಕಳ್ಳತನ ನಡೆದಿತ್ತು.

ಕುಮಾರಸ್ವಾಮಿ ಲೇಔಟ್ ನಿವಾಸಿ ಸಂದೀಪ್ ಲಾಲ್ ಅವರು ಕೆಲಸದ ನಿಮಿತ್ತ ಚೆನ್ನೈಗೆ ತೆರಳಿದ್ದ ವೇಳೆಯಲ್ಲಿ ಈ ಕಳ್ಳತನ ನಡೆದಿತ್ತು.

ಪ್ರಸ್ತುತ ಪೊಲೀಸರು ಬಂಧಿತರಿಂದ 1.76 ಕೋಟಿ ರೂ. ನಗದು ಹಾಗೂ 188 ಗ್ರಾಂ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ. ಪತ್ತೆಯಾದ ಹಣದ ಪೈಕಿ 500 ರೂ. ನೋಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿರುವುದು ವಿಶೇಷ.

ಆರೋಪಿಗಳ ಬಳಿ ಇದ್ದ ಕಂತೆ ಕಂತೆ ಹಣ ಕಂಡು ಪೊಲೀಸರೇ ಸುಸ್ತಾಗಿದ್ದಾರೆ. ಪೊಲೀಸರು ಖತರ್ನಾಕ್ ಕಳ್ಳರಿಂದ ಕೋಟಿ ಹಣ ವಶಕ್ಕೆ ಪಡೆದುಕೊಂಡಿರುವುದನ್ನು ಠಾಣೆಯಲ್ಲಿ ನೋಡಿದ ಜನರು ಬಾಯಿ ಮೇಲೆ ಬೆರಳಿಟ್ಟು ನೋಡ್ತಿದ್ದಾರೆ.

ಐದು ತಿಂಗಳ ಹಿಂದೆ ಜೈಲಿಂದ ಹೊರಬಂದಿದ್ದ ಆರೋಪಿಗಳು ಮಾರ್ಚ್ 28 ರಂದು ಕುಮಾರಸ್ವಾಮಿ ಲೇಔಟ್ ನಿವಾಸಿ ಸಂದೀಪ್ ಲಾಲ್ ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದಾರೆ. ಲಾಯರ್ ಶುಲ್ಕ ಕೊಡಲು ಎರಡು ಲಕ್ಷ ಆರೋಪಿಗಳು ಕಳ್ಳತನ ಮಾಡಲು ಹೋಗಿದ್ದರು. ಈ ವೇಳೆ ಮನೆಯಲ್ಲಿ ಮೂಟೆಗಳಲ್ಲಿ ಇಟ್ಟಿದ್ದ ಎರಡು ಕೋಟಿ ರೂ. ನಗದು ಸಿಕ್ಕಿದೆ. ಅದನ್ನು ತೆಗೆದುಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಇದೇ ವೇಳೆ ಮನೆಯಲ್ಲೇ ಇದ್ದ ಫಾರಿನ್ ಎಣ್ಣೆಗೆ ನೀರು ಬೇರಸದೇ ಕುಡಿದು ಡಾನ್ಸ್ ಮಾಡಿದ್ದಾರೆ. ಆರೋಪಿಗಳು ಸಮವಾಗಿ ಒಂದು ಕೋಟಿಯನ್ನು ಹಂಚಿಕೊಂಡಿಲ್ಲ. ಮೂಟೆಯನ್ನು ಸಮವಾಗಿ ಕತ್ತರಿಸಿ ಅಂದಾಜಿನ ಮೇಲೆ ಹಣವನ್ನು ಹಂಚಿಕೊಂಡಿದ್ದಾರೆ.

ಹಣ ಕದ್ದ ವಾರದಲ್ಲಿ ಸಣ್ಣ ಪುಟ್ಟ ಸಾಲಗಳು ಸೇರಿದಂತೆ 25 ಲಕ್ಷ ಖರ್ಚು ಮಾಡಿದ್ದಾರೆ. ಪ್ರಸ್ತುತ ಪೊಲೀಸರು ಆರೋಪಿಗಳಿಂದ 1 ಕೋಟಿ 76 ಲಕ್ಷ ವಶಕ್ಕೆ ಪಡೆದಿಕೊಂಡಿದ್ದಾರೆ.

ಮನೆ ಮಾಲೀಕ ಸಂದೀಪ್ ಲಾಲ್ ಮೊದಲಿಗೆ ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದರು. ನಂತರ ಎರಡು ಕೋಟಿ ಹಣ ಕಳುವಾಗಿದೆ ಎಂದು ತಿಳಿಸಿದ್ದಾರೆ.

ಇಷ್ಟೊಂದು ಪ್ರಮಾಣದ ಹಣ ಸಂದೀಪ್ ಲಾಲ್ ಮನೆಯಲ್ಲಿ ಸಿಕ್ಕಿದ್ದು ಹೇಗೆ? ಯಾವ ಕಾರಣಕ್ಕೆ ಹಣ ಮನೆಯಲ್ಲಿ ಇಡಲಾಗಿತ್ತು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಂದೀಪ್ ಲಾಲ್‍ಗೆ ಸಂಕಷ್ಟ ಎದುರಾಗಿದೆ.

Share This Article
Leave a comment