ದೆಹಲಿ ಟು ಲಂಡನ್ 70 ದಿನ ಬಸ್ ನಲ್ಲಿ ಪ್ರವಾಸ: 18 ದೇಶ, 20 ಸಾವಿರ ಕಿಮೀ – 15 ಲಕ್ಷ ಟಿಕೆಟ್

Team Newsnap
1 Min Read

ದೆಹಲಿ ಟು ಲಂಡನ್‍ವರೆಗೆ ಬಸ್‍ನಲ್ಲಿ ಪ್ರಯಾಣಿಸುವಂತಹ ನೂತನ ಪ್ರವಾಸ ಆರಂಭಿಸಲು ಭಾರತದ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿ ಸಿದ್ಧತೆ ಮಾಡಿಕೊಂಡಿದೆ.

ದೆಹಲಿಯಿಂದ ಹೊರಡುವ ಬಸ್ 70 ದಿನಗಳ ಕಾಲ ಸಂಚಾರ ಮಾಡಲಿದೆ, ಒಟ್ಟು 20 ಸಾವಿರ ಕಿಮೀ, ಕ್ರಮಿಸಿ 18 ದೇಶಗಳನ್ನು ಸುತ್ತಲಿದೆ.

ಈಗಾಗಲೇ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿ ಈ ಟೂರ್ ಪ್ಯಾಕೇಜ್‍ಗೆ ದರ ಕೂಡ ನಿಗದಿ ಮಾಡಿದೆ. 1 ಟಿಕೆಟ್‍ನ ಬೆಲೆ 15 ಲಕ್ಷ ರೂ. ನಿಗದಿಮಾಡಿದೆ.

ಟಿಕೆಟ್, ವೀಸಾ, ವಸತಿ, ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಕೂಡ 15 ಲಕ್ಷ ರೂ.ನಲ್ಲಿ ಬರಿಸುವಂತಹ ಪ್ಲಾನ್ ಮಾಡಿಕೊಂಡು ಪ್ರವಾಸಿಗರಿಗೆ ಆಫರ್ ನೀಡಿದೆ.
ದೆಹಲಿಯಿಂದ ಲಂಡನ್ ಪ್ರವಾಸ ಕೈಗೊಳ್ಳಲಿರುವ ಐಶಾರಾಮಿ ಬಸ್‍ನಲ್ಲಿ 20 ಸೀಟ್ ಇರಲಿದ್ದು, ಪ್ರತಿ ಪ್ರವಾಸಿಗರಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇದೆ. ಅಲ್ಲದೇ ಬಸ್‍ನಲ್ಲೇ ಆಹಾರ, ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಬಸ್ ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಕಿರ್ಗಿಸ್ತಾನ ಮೂಲಕ ಫ್ರಾನ್ಸ್‌ಗೆ ತಲುಪಲಿದೆ.

ಫ್ರಾನ್ಸ್‌ನ ಕಾಲೆಯಿಂದ ಲಂಡನ್‍ನ ನಡೋವರ್‍ವರೆಗೆ ಜಲಪ್ರದೇಶ ಇರುವುದರಿಂದ ಬಸ್‍ನ್ನು ಹಡಗಿನಲ್ಲಿ ಇಟ್ಟು ಸಾಗಿಸುವ ಪ್ಲಾನ್ ಕಂಪನಿ ಮಾಡಿಕೊಂಡಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಈ ಹಿಂದೆ 1976 ಸುಮಾರಿಗೆ ಕೋಲ್ಕತ್ತಾದಿಂದ ಲಂಡನ್‍ಗೆ ಇದೇ ರೀತಿಯ ಬಸ್ ಟೂರ್‌ ಬ್ರಿಟನ್ ಮೂಲದ ಕಂಪನಿ ಅಲ್ಬರ್ಟ್ ಟೂರ್ಸ್ ಆರಂಭಿಸಿತ್ತು.

Share This Article
Leave a comment