May 29, 2022

Newsnap Kannada

The World at your finger tips!

ramjan

ರಾಜ್ಯದಲ್ಲಿ ರಂಜಾನ್ ಇಂದಲ್ಲ ನಾಳೆ – ಸರ್ಕಾರಿ ರಜೆ ಮಾತ್ರ ಇಂದೇ

Spread the love

ರಾಜ್ಯದಲ್ಲಿ ರಂಜಾನ್ ಆಚರಣೆ ಇಂದಲ್ಲ ನಾಳೆ ಎಂದು ರಾಜ್ಯ ವಕ್ಫ ಮಂಡಳಿ ಹೇಳಿದೆ. ಆದರೆ ಸರ್ಕಾರ ಇಂದೇ ರಜೆ ಘೋಷಣೆ ಮಾಡಿದೆ.

ಈದ್-ಉಲ್-ಫಿತರ್ ಮತ್ತು ಶವ್ವಾಲ್ ತಿಂಗಳ ಅರ್ಧಚಂದ್ರ ಭಾರತದಲ್ಲಿ ಗೋಚರಿಸದ ಕಾರಣ ದೆಹಲಿ, ಯುಪಿ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ನಾಳೆ ಆಚರಿಸಲಾಗುವುದು ಎಂದು ದೃಢಪಡಿಸಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ. ಮಲೇಷ್ಯಾ ನಾಳೆ ಈದ್ ಆಚರಣೆಗಳನ್ನು ಘೋಷಿಸಿದೆ.

ಇದಕ್ಕೂ ಮುನ್ನ ಬ್ರೂನಿ ಮತ್ತು ಫಿಲಿಪೈನ್ಸ್ ಕೂಡ ಭಾನುವಾರ ಈದ್ ಘೋಷಿಸಿದ್ದವು. ಸೌದಿ ಅರೇಬಿಯಾ, ಯುಎಇ, ಬ್ರೂನೈ, ಫಿಲಿಪೈನ್ಸ್, ಕತಾರ್, ಕುವೈತ್ ಇತರ ಅರಬ್ ದೇಶಗಳು ಇಂದು ಈದ್ ಆಚರಿಸಲು ಸಜ್ಜಾಗಿವೆ.

error: Content is protected !!