December 19, 2024

Newsnap Kannada

The World at your finger tips!

IT,raid,assets

IT ರಿಟರ್ನ್ ಸಲ್ಲಿಸಲು ನಾಳೆ ಕೊನೆ ದಿನ : ತಪ್ಪಿದರೆ ದಂಡ

Spread the love

ಆದಾಯ ತೆರಿಗೆ (IT) ರಿಟರ್ನ್ ಸಲ್ಲಿಸಲು ನಾಳೆ (ಜುಲೈ 31 )ಕೊನೆಯ ದಿನ. ರಿಟರ್ನ್ ಸಲ್ಲಿಸದೇ ಇದ್ದರೆ ದಂಡ ಪಾವತಿಸಬೇಕಾಗುತ್ತದೆ.

ಈ ಹಿಂದಿನ 2 ವರ್ಷಗಳಲ್ಲಿ ವೆಬ್‌ಸೈಟ್‌ ಸಮಸ್ಯೆ, ಕೋವಿಡ್‌ ಅಲೆ ಇತ್ಯಾದಿ ಕಾರಣಗಳಿಂದ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು.

ಕಳೆದ ವರ್ಷ ಡಿ.31 ಅಂತಿಮ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಈ ವರ್ಷ ಗಡುವು ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಒಟ್ಟು 5.89 ಕೋಟಿ ಜನ ರಿಟರ್ನ್‌ ಫೈಲ್ ಮಾಡಿದ್ದರು. ಈ ವರ್ಷ ಗುರುವಾರ ಸಂಜೆಯವರೆಗೆ 4 ಕೋಟಿ ಜನ ರಿಟರ್ನ್ಸ್ ಸಲ್ಲಿಕೆ ಮಾಡಿದ್ದರು. ನಂತರ ನಿತ್ಯ 30 ಲಕ್ಷ ಜನರು ಸಲ್ಲಿಕೆ ಮಾಡುತ್ತಿದ್ದಾರೆ. ಜು.31ರ ಬಳಿಕವೂ ಸಲ್ಲಿಕೆ ಮಾಡಲು ಅವಕಾಶ ಇದೆಯಾದರೂ ದಂಡ ಪಾವತಿಸಬೇಕಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!