ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ ಮಾರ್ಚ್ 14 ರಿಂದ ಟೋಲ್ ಸಂಗ್ರಹ

Team Newsnap
1 Min Read

ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಮಾರ್ಚ್ 14 ರಿಂದ ಟೋಲ್ ಸಂಗ್ರಹ ಮಾಡಲಾಗುವುದು.

ಈ ಟೋಲ್ ಸಂಗ್ರಹ ಮೊದಲ ಹಂತದಲ್ಲಿ ಬೆಂಗಳೂರು- ನಿಡ್ಲಘಟ್ಟ ತನಕ ಟೋಲ್ ಸಂಗ್ರಹಿಸ ಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮಾರ್ಚ್ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಲೋಕಾರ್ಪಣೆ ಮಾಡುವರು.

ಗೆಜ್ಜಲಗೆರೆಯಲ್ಲಿ ನರೇಂದ್ರ ಮೋದಿ ಅವರ ಚಾಪರ್ ಲ್ಯಾಂಡ್ ಆಗಲಿದೆ. ಮಂಡ್ಯದ ಗೆಜ್ಜಲಗೆರೆ ಬಳಿ ಎಕ್ಸ್‌ಪ್ರೆಸ್‌ ಹೈವೆ ಉದ್ಘಾಟನಾ ಸಮಾರಂಭಕ್ಕೆ ಸ್ಥಳ‌ ನಿಗದಿ ಮಾಡಲಾಗಿದೆ ಎಂದರು.

ರಕ್ಷಣಾ ಪಡೆಯವರು ಅನುಮತಿ ನೀಡಿದರೆ ಒಂದೂವರೆ ಕಿಲೋಮೀಟರ್ ತನಕ ನರೇಂದ್ರ ಮೋದಿ ಅವರಿಂದ ರೋಡ್ ಶೋ ನಡೆಯಲಿದೆ.

ಸರ್ವಿಸ್ ರಸ್ತೆ ಪೂರ್ಣ ಮಾಡಲು ಕೋರ್ಟ್ ವ್ಯಾಜ್ಯದಿಂದ ತಡೆ ಇದೆ. ನಾಲ್ಕು ಮಂದಿ ಜಮೀನು ಮಾಲೀಕರು ಕೋರ್ಟ್ ನಲ್ಲಿ ಕೇಸ್ ಹಾಕಿರುವ ಕಾರಣ ಸರ್ವಿಸ್ ರಸ್ತೆ ಪೂರ್ಣ ಮಾಡಲು ಅಡ್ಡಿಯಾಗಿದೆ ಎಂದರು.

ಶೀಘ್ರದಲ್ಲೇ ಸಮಸ್ಯೆ ಪರಿಹಾರ ಮಾಡಿ ಸರ್ವಿಸ್ ರಸ್ತೆ ಪೂರ್ಣ ಮಾಡಲಾಗುವುದು. ತರುವಾಯ ಪೂರ್ಣ ಪ್ರಮಾಣದಲ್ಲಿ ಟೋಲ್ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.ಇದನ್ನು ಓದಿ -ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್

Share This Article
Leave a comment