ಟೋಕಿಯೊ ಒಲಂಪಿಕ್ಸ್ : ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನುಗೆ ಬೆಳ್ಳಿಪದಕ

Team Newsnap
1 Min Read

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಮೊದಲ ಬೆಳ್ಳಿಪದಕ ಗೆದ್ದ ಭಾರತದ ಮೀರಾ ಬಾಯಿ ಚಾನು ದೇಶದ ವಿಜಯ ಪತಾಕಿ ಹಾರಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಈ ಪದಕ ಬಂದಿದೆ. ಒಲಂಪಿಕ್ಸ್​​ನಲ್ಲಿ ಮಹಿಳಾ ವೇಯ್ಟ್ ​ಲಿಫ್ಟಿಂಗ್​​ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

meera bhai1

49 ಕೆಜಿ ವಿಭಾಗದಲ್ಲಿ ಬೆಳ್ಳಿ  ಪದಕ ಗೆದ್ದ ಮೀರಾಬಾಯಿ ಭಾರತಕ್ಕೆ ಗೌರವ ತಂದಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯುತ್ತಿದೆ.

ಪ್ರಧಾನಿ ಶುಭಾಷಯ :
ಪ್ರಧಾನಿ ಮೋದಿ ಈ ಗೆಲುವು ಕುರಿತಂತೆ ಟ್ವೀಟ್ ಮಾಡಿ ಮೀರಾಬಾಯಿ ಚಾನು ಅವರಿಗೆ ಶುಭಾಶಯ ಹೇಳಿದ್ದಾರೆ.

ಟೋಕಿಯೋ 2021 ಪ್ರಾರಂಭಿಸಲು ಇದಕ್ಕಿಂತ ಖುಷಿಯಾದ ಪ್ರಾರಂಭ ಇನ್ನೇನು ಬೇಕು..? ಮೀರಾಬಾಯಿ ಚಾನು ಅವರ ಅತ್ಯದ್ಭುತ ಆಟದಿಂದ ಭಾರತ ಉಲ್ಲಸಿತಗೊಂಡಿದೆ. ಅವರ ಗೆಲುವು ಎಲ್ಲರನ್ನೂ ಉತ್ತೇಜಿಸುತ್ತದೆ ಎಂದಿದ್ದಾರೆ.

202 ಕೆಜಿ ತೂಕ ಎತ್ತಿದ ಮೀರಾ :

ಮಹಿಳಾ ವೇಯ್ಟ್ ಲಿಫ್ಟಿಂಗ್​ನ ಕೊನೆಯ ಸುತ್ತಿನಲ್ಲಿ ಭಾರತದ ಮೀರಾಬಾಯಿ ಚಾನು 202 ಕೆ.ಜಿ ತೂಕ ಎತ್ತಿದರೆ, ಚೀನಾದ ಹೊಯಿ ಝುಯಿಹುಯಿ 210 ಕೆಜಿ ತೂಕ ಲಿಫ್ಟ್ ಮಾಡುವ ಮೂಲಕ ಹೊಸ ಒಲಂಪಿಕ್ ದಾಖಲೆ ಬರೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು.

Share This Article
Leave a comment