October 7, 2022

Newsnap Kannada

The World at your finger tips!

navya

ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ : ರಾಜಕುಮಾರ್ ವಿರುದ್ದ ಇಂದು ನವ್ಯಶ್ರೀ 12 ಪುಟಗಳ ದೂರು

Spread the love

ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ, ಹನಿಟ್ರ್ಯಾಪ್ ಆರೋಪಿತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ ಸೇರಿದಂತೆ ಇತರ ಸೆಕ್ಷನ್ ಹಾಕಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್‌ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿದೆ.ಮೋಜು ಮಸ್ತಿಗಾಗಿ ಪ್ರಿಯಕರನಿಂದ ದೊಡ್ಡಪ್ಪನ ಮನೆಯಲ್ಲೇ ಕನ್ನ ಹಾಕಿಸಿದ ಯುವತಿ ದೀಕ್ಷಿತಾ !

ಅಧಿಕಾರಿ ರಾಜಕುಮಾರ್ ಟಾಕಳೆ ನೀಡಿರುವ ದೂರಿನ ವಿಚಾರಣೆಗೆ ಬೆಳಗಾವಿ ಎಪಿಎಂಸಿ ಪೊಲೀಸರು ನೋಟಿಸ್ ನೀಡಿದ್ದಾರೆ , ಬೆಳಗಾವಿಯಲ್ಲಿ ಇರಲು ವಸತಿ ಸಮಸ್ಯೆ ಕಾರಣ ನೀಡಿ ಮುಚ್ಚಳಿಕೆ ಪತ್ರವನ್ನು ನವ್ಯಶ್ರೀ ಬರೆದುಕೊಟ್ಟಿದ್ದಲ್ಲದೇ ತನಿಖೆಗೆ ಸಹಕಾರ ಕೊಡುತ್ತೇನೆ ಎಂದು ಪೋಲಿಸರ ಮುಂದೆ ಹೇಳಿದ್ದಾಳೆ.

error: Content is protected !!