December 23, 2024

Newsnap Kannada

The World at your finger tips!

vidansoudha

ಇಂದು ಮತ್ತೆ ಇಬ್ಬರು ನಾನ್ ಐಪಿಎಸ್ ಅಧಿಕಾರಿ, 30 ಇನ್ಸ್​ಪೆಕ್ಟರ್​​ಗಳ ವರ್ಗಾವಣೆ – ಸರ್ಕಾರದ ಆದೇಶ

Spread the love

ರಾಜ್ಯ ಸರ್ಕಾರ ಸಿವಿಲ್ ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ. ಅಲ್ಲದೇ ಇಬ್ಬರು ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಕಳೆದ ಕೆಲವು ತಿಂಗಳಿಂದ ಆಡಳಿತ ಯಂತ್ರದಲ್ಲಿ ಮೇಜರ್​ ಸರ್ಜರಿ ಮಾಡುತ್ತಿದೆ. ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಸರ್ಕಾರ ಇಂದು 30 ಸಿವಿಲ್ ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ.

ಇಬ್ಬರು ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇಬ್ಬರು ನಾನ್ IPS​ ಅಧಿಕಾರಿಗಳಾದ ಎಸ್.ರಮೇಶ್ ಕುಮಾರ್, ಸಿ.ಟಿ.ಜಯಕುಮಾರ್​ ಅವರನ್ನು ಪೊಲೀಸ್ ಅಧೀಕ್ಷರನ್ನಾಗಿ ವರ್ಗಾವಣೆ ಮಾಡಿದೆ. ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು.ಪ್ರೋತ್ಸಾಹ ಧನಕ್ಕೆ ಆಗ್ರಹ

ಎಸ್.ರಮೇಶ್ ಕುಮಾರ್- ಪೊಲೀಸ್ ಅಧೀಕ್ಷಕರು, ರಾಜ್ಯಗುಪ್ತ ವಾರ್ತೆ ಸಿ.ಟಿ.ಜಯಕುಮಾರ್-ಉತ್ತರ ಕನ್ನಡ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ.

ವರ್ಗಾವಣೆಗೊಂಡ 30 ಮಂದಿ ಇನ್ಸ್ ಪೆಕ್ಟರ್ ಗಳ ಪಟ್ಟಿ:

WhatsApp Image 2022 11 29 at 10.30.19 PM
WhatsApp Image 2022 11 29 at 10.30.43 PM

Copyright © All rights reserved Newsnap | Newsever by AF themes.
error: Content is protected !!