ಶಿವಾನಂದ ತಗಡೂರು ಅವರಿಗೆ ತವರಿನಲ್ಲಿ ಅಭಿಮಾನದ ಸನ್ಮಾನ

Team Newsnap
1 Min Read

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಹಾಗೂ ಶ್ರೀಮತಿ ಮಾಲಾರವರನ್ನು ಚನ್ನರಾಯಪಟ್ಟಣ ತಾಲೂಕು ಅಭಿಮಾನಿಗಳ ಬಳಗದ ಪರವಾಗಿ ಶಾಸಕರಾದ ಸಿ.ಎನ್.ಬಾಲಕೃಷ್ಣರವರು ಸನ್ಮಾನಿಸಿ ತವರಿಗೆ ಗೌರವ ಸಮರ್ಪಣೆ ಮಾಡಿ ಶುಭ ಹಾರೈಸಿದರು.

ಪತ್ರಕರ್ತರಾಗಿ ಮತ್ತು ಸಂಘಟಕರಾಗಿ ಶಿವಾನಂದ ತಗಡೂರು ಅವರ ವೃತ್ತಿ ನಿಷ್ಠೆ, ವಿಭಿನ್ನ ಕಾರ್ಯ ವೈಖರಿ ಹಾಗೂ ಸಮಾಜಮುಖಿ ಕೆಲಸಗಳಿಂದ ಪತ್ರಕರ್ತರ ಸಮುದಾಯಕ್ಕೆ ಸಲ್ಲಿಸಿರುವ ಸೇವೆ ಅನನ್ಯ ಎಂದು ಸಮಾರಂಭದಲ್ಲಿ ಅಭಿಮಾನದಿಂದ ಸ್ಮರಿಸಲಾಯಿತು.

WhatsApp Image 2023 07 09 at 8.44.04 PM

ಮಾನವೀಯ ತುಡಿತದಿಂದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ಪಂದಿಸಿದ ಪರಿಯಿಂದಲೇ ಅವರು ಸಮಾಜಕ್ಕೆ ಮಾದರಿಯಾಗಿ ನಡೆದುಕೊಂಡಿರುವುದು ಶ್ಲಾಘನೀಯ ಎಂದು ಅವರ ಸೇವೆ ಸ್ಮರಿಸಲಾಯಿತು.

ಇದೇ ಸಂದರ್ಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪತ್ರಕರ್ತರು, ನವಿಲೆ, ತಗಡೂರು ಸುತ್ತಮುತ್ತಲ ಗ್ರಾಮಸ್ಥರು ಸಹ ಸನ್ಮಾನಿಸಿ ಶುಭ ಹಾರೈಸಿದರು .
ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಉಪಾಧ್ಯಕ್ಷರಾದ ವೇಣುಕುಮಾರ್, ಪ್ರದಾನ ಕಾರ್ಯದರ್ಶಿ ಬನವಾಸೆ ಮಂಜು, ರಾಷ್ಟೀಯ ಮಂಡಳಿ ಸದಸ್ಯ ಜಿ.ಪ್ರಕಾಶ್, ತಾಲೂಕು ಅಭಿಮಾನಿಗಳ ಬಳಗದ ಸಂಚಾಲಕ ಎನ್.ಪರಮೇಶ್, ತಗಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜು, ಅಣತಿ ಆನಂದ್, ಮಾಜಿ ಪ್ರದಾನರಾದ ವೀರೇಶ್, ಪ್ರಮುಖರಾದ ಗಿರೀಶ್, ವೀರೇಶ್,ಅಶೋಕ್ ಓಬಳಾಪುರ ಬಸವರಾಜ್, ಬಾಗೂರು ಶಿವಣ್ಣ ಮತ್ತಿತರರು ಹಾಜರಿದ್ದರು.

Share This Article
Leave a comment