ಮಹಿಷ ದಸರಾ ತಡೆಯಲು : ಚಲೋ ಚಾಮುಂಡಿ ಬೆಟ್ಟ ಜಾಥಾ:ಸಂಸದ ಪ್ರತಾಪ್ ಸಿಂಹ 

Team Newsnap
2 Min Read

ಮೈಸೂರು : ಮಹಿಷಾ ದಸರಾ ಆಸ್ತಿಕರ ಭಾವನೆಗೆ ನೋವು ತರುತ್ತಿದೆ, ಮಹಿಷಾ ದಸರಾ ಮೂಲಕ ದೆವ್ವವನ್ನು ದೇವರು ಮಾಡಲು ಹೊರಟ್ಟಿದ್ದಾರೆ. ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 13ರಂದು ಮಹಿಷ ದಸರಾ ತಡೆಯಲು ಚಾಮುಂಡಿ ಬೆಟ್ಟ ಚಲೋವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು.ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸವಾಗಿದೆ, ಇದನ್ನು ತಡೆಯಲು ಅ.13ರಂದು ಚಾಮುಂಡಿ ಚಲೋ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಮೈಸೂರಿನ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು. ಈ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಮಾಡಿದ್ದರು.

ಮಹಿಷ ದಸರಾ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮದಲ್ಲಿ 5 ಸಾವಿರ‌ ನಾಗರೀಕರು ಪಾಲ್ಗೊಳ್ಳುತ್ತಾರೆ. ಚಾಮುಂಡಿ ಬೆಟ್ಟದ ಪಾದ ಹಾಗೂ ವಿಶ್ವವಿದ್ಯಾಲಯದ ಆವರಣದಿಂದ ಜನ ತೆರಳುತ್ತಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿಗೆ ಪೂಜೆ ಸಲ್ಲಿಸಿ ದಿನವಿಡಿ ಕಾರ್ಯಕ್ರಮ ನಡೆಸುತ್ತೇವೆ. ಜಿಲ್ಲಾಧಿಕಾರಿ ಹಾಗು ಸಿಟಿ ಪೊಲೀಸ್ ಕಮಿಷನರ್‌ ಬಳಿ ತೆರಳಿ ಮಹಿಷ ದಸರಾಗೆ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ. ಇದು ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ ಅಲ್ಲ. ಮತ್ತೆ ಮಹಿಷ ದಸರಾ ತಡೆಗಟ್ಟುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಚಾಮುಂಡಿ ಚಲೋದಲ್ಲಿ ಮೈಸೂರಿನ ಎಲ್ಲಾ ಪ್ರಜ್ಞಾವಂತ ನಾಗರೀಕರು ಭಾಗಿಯಾಗಲಿದ್ದಾರೆ.ಅಕ್ಟೋಬರ್ 13 ರಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟ ಚಲೋ ನಡೆಯುತ್ತದೆ. ಮಹಿಷಾ ದಸರಾವನ್ನ ತಡೆಯುವುದೇ ನಮ್ಮ ಉದ್ದೇಶವಾಗಿದೆ. ಮೈಸೂರು‌ ಜಿಲ್ಲೆಯ‌ 11 ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ. ಧರ್ಮಾತೀತವಾಗಿ ಎಲ್ಲರಿಗೂ ಕರೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.ತಿಂಗಳ ನಂತರ 100 ಅಡಿಯ ಗಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ

ಇದು ಬಿಜೆಪಿ ಕಾರ್ಯಕ್ರಮವಲ್ಲ. ಇದು ಮೈಸೂರಿನ ಜನರ ಜಾಥಾ. ಅಕ್ಟೋಬರ್ 13 ರಂದು ಮಹಿಷಾ ದಸರಾ ತಡೆಯುವುದೇ ನಮ್ಮ ಜಾಥಾದ ಉದ್ದೇಶ. ಇದು ಪಕ್ಷಾತೀತ ಹೋರಾಟ. ನಾವು ಸಂಘರ್ಷಕ್ಕೂ ಸಿದ್ಧರಿದ್ದೇವೆ. ಎಂದು ಹೇಳಿದರು.

Share This Article
Leave a comment