ಭಾಷೆಗಳಲ್ಲೂ”ಆತ್ಮ ನಿರ್ಭರ್’ ಆಗಿರಬೇಕು: ಅಮಿತ್ ಶಾ ಅಭಿಮತ

Team Newsnap
1 Min Read

ಜನರು ಸರಕುಗಳ ಉತ್ಪಾದನೆಯಲ್ಲಿ ಮಾತ್ರವಲ್ಲದೆ ಭಾಷೆಗಳಲ್ಲೂ”ಆತ್ಮ ನಿರ್ಭರ್’ ಆಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.
ಹಿಂದಿ ದಿವಸ್ ಅಂಗವಾಗಿ ನವದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದಕ್ಕೆ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಅನುಮೋದಿಸಿದರು.

amithsha


ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಪ್ರಧಾನಿಯವರು ತಮ್ಮ ಆಲೋಚನೆಗಳನ್ನು ಹೇಳಲು ಹಿಂದಿ ಭಾಷೆಯನ್ನೇ ಬಳಸುತ್ತಾರೆ ಎಂದು ಶಾ ಹೆಮ್ಮೆಯಿಂದ ನುಡಿದರು. ಹಿಂದಿಯು ಎಲ್ಲ ಭಾರತೀಯ ಪ್ರಾದೇಶಿಕ ಭಾಷೆಗಳ “ಸಖಿ’ ಆಗಿದೆ.

ಎಲ್ಲ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಬೇಕು ಹಾಗೂ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು. ಹಿಂದಿಗೆ ಪ್ರಾದೇಶಿಕ ಭಾಷೆಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.


2014 ರಿಂದ ಹೆಚ್ಚಿನ ಸಂಸದರು ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಮಾತನಾಡುತ್ತಿದ್ದಾರೆ. ಇದು ಜನರ ಪ್ರತಿನಿಧಿಗಳು ತಮ್ಮ ಪ್ರದೇಶದ ಸಮಸ್ಯೆಗಳನ್ನು ಉನ್ನತ ವೇದಿಕೆಯಲ್ಲಿ ಎತ್ತಿಹಿಡಿಯಲು ಸಹಾಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

Share This Article
Leave a comment