ಡಿಆರ್‌ಡಿಒ ಬ್ಯಾಗ್‌ನಲ್ಲಿ ತಿರುಪತಿ ಲಡ್ಡು

Team Newsnap
1 Min Read

ಇನ್ನು ಮುಂದೆ ತಿಮ್ಮಪ್ಪನ ಭಕ್ತರು ಹೊಸರೂಪದ ಬ್ಯಾಗ್‌ನಲ್ಲಿ ಲಡ್ಡುಪ್ರಸಾದ ಪಡೆಯಬಹುದಾಗಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಿರುಪತಿ ಲಡ್ಡು ವಿತರಣೆಗೆಂದು ಪರಿಸರ ಸ್ನೇಹಿ ಬ್ಯಾಗ್ ಸಿದ್ಧಪಡಿಸಿದೆ.


ಹೊಸ ಬ್ಯಾಗ್‌ಗಳಲ್ಲಿ ಲಡ್ಡು ವಿತರಿಸುವ ಕೌಂಟರ್ ಅನ್ನು ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ, ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎಸ್. ಜವಾಹರ್ ರೆಡ್ಡಿ ಉದ್ಘಾಟಿಸಿದರು.


ಸಾಂಪ್ರದಾಯಿಕ ಪ್ಲಾಸ್ಟಿಕ್ ಬ್ಯಾಗ್‌ಗಳು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಆದರೆ ಈ ಹೊಸ ಬ್ಯಾಗ್‌ಗಳು ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ. ಮಣ್ಣಿನಲ್ಲಿ ಬೇಗನೆ ಕೊಳೆಯುತ್ತವೆ ಜತೆಗೆ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ವಿವರಿಸಿದರು.
ಭಕ್ತರ ಪ್ರತಿಕ್ರಿಯೆ ಗಮನಿಸಿ ಪೂರ್ಣಪ್ರಮಾಣದಲ್ಲಿ ಹೊಸಬ್ಯಾಗ್‌ನಲ್ಲಿ ಲಡ್ಡು ಮಾರಾಟ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದರು.

Share This Article
Leave a comment