ಶ್ರೀರಂಗಪಟ್ಟಣದಲ್ಲಿ ನಾಳೆ ಮುಸ್ಲಿಂಮರಿಂದ ಟಿಪ್ಪು ಜಾಥಾ- ಬಿಗಿ ಬಂದೋಬಸ್ತು

Team Newsnap
1 Min Read
Jamia Masjid: Illegal madrasa: Hindu Vigilance Forum deadline for eviction ಜಾಮಿಯಾ ಮಸೀದಿಯಲ್ಲಿ : ಅಕ್ರಮ ಮದರಸಾ : ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಮತ್ತೆ ಆರಂಭವಾದಂತೆ ಕಾಣುತ್ತಿದೆ.ಈಗ ಮುಸ್ಲಿಮರು ಕೂಡ ಜಾಥಾಕ್ಕೆ ನಿರ್ಧರಿಸಿದ್ದಾರೆ. ನಾಳೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ.

ಹಿಂದೂ ಸಂಘಟನೆಗಳು ಅದು ದೇವಸ್ಥಾನ ಎಂದು ವಾದಿಸಿದರೆ, ಇತ್ತ ಮುಸ್ಲಿಂ ಸಂಘಟನೆಗಳು ಅಲ್ಲಿರುವುದು ಮಸೀದಿಯೇ ಅಂತಾ ಹೇಳಿತ್ತು. ಈ ಬಗ್ಗೆ ವಾದ-ವಿವಾದವೂ ನಿಲ್ಲುತ್ತಿಲ್ಲ.

ಮುಸ್ಲಿಮರಿಂದ ನಾಳೆ ಟಿಪ್ಪು ಜಾಥಾ

ಮತ್ತೆ ಶ್ರೀರಂಗಪಟ್ಟಣ ಮಸೀದಿ ವಿವಾದ ಭುಗಿಲೆದ್ದಿದೆ. ವಿವಾದಿತ ಸ್ಥಳ ಶ್ರೀರಂಗಪಟ್ಟಣದಲ್ಲಿ ನಾಳೆ ಟಿಪ್ಪು ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ. ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಎಲ್ಲೆಲ್ಲಿ ನಡೆಯಲಿದೆ ಟಿಪ್ಪು ಜಾಥಾ?

ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ, ದೇಗುಲಗಳನ್ನು ನಾಶ ಮಾಡಿ ಶ್ರೀರಂಗಪಟ್ಟಣ ಮಸೀದಿಯನ್ನು ನಿರ್ಮಿಸಿದ್ದ ಅಂತಾ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಇದಕ್ಕೆ ಟಕ್ಕರ್ ಎಂಬಂತೆ ನಾಳೆ ಟಿಪ್ಪು ಸುಲ್ತಾನ್ ಸಾಧನೆ, ಯುದ್ಧ, ಇತಿಹಾಸ ಹೇಳುವ ಜಾಥಾ ನಡೆಯಲಿದೆ.

ಶ್ರೀರಂಗಪಟ್ಟಣದ ದರಿಯಾ ದೌಲತ್​ನಿಂದ ಗುಂಬಜ್​ವರೆಗೆ ನಡೆಯುವ ರ್ಯಾಲಿಯಲ್ಲಿ
ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ.

ಶ್ರೀರಂಗಪಟ್ಟಣ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆ ಮನವಿ ಮಾಡಿದೆ.

Share This Article
Leave a comment