ಹಿಂದೂ ಸಂಘಟನೆಗಳು ಅದು ದೇವಸ್ಥಾನ ಎಂದು ವಾದಿಸಿದರೆ, ಇತ್ತ ಮುಸ್ಲಿಂ ಸಂಘಟನೆಗಳು ಅಲ್ಲಿರುವುದು ಮಸೀದಿಯೇ ಅಂತಾ ಹೇಳಿತ್ತು. ಈ ಬಗ್ಗೆ ವಾದ-ವಿವಾದವೂ ನಿಲ್ಲುತ್ತಿಲ್ಲ.
ಮುಸ್ಲಿಮರಿಂದ ನಾಳೆ ಟಿಪ್ಪು ಜಾಥಾ
ಮತ್ತೆ ಶ್ರೀರಂಗಪಟ್ಟಣ ಮಸೀದಿ ವಿವಾದ ಭುಗಿಲೆದ್ದಿದೆ. ವಿವಾದಿತ ಸ್ಥಳ ಶ್ರೀರಂಗಪಟ್ಟಣದಲ್ಲಿ ನಾಳೆ ಟಿಪ್ಪು ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ. ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಎಲ್ಲೆಲ್ಲಿ ನಡೆಯಲಿದೆ ಟಿಪ್ಪು ಜಾಥಾ?
ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ, ದೇಗುಲಗಳನ್ನು ನಾಶ ಮಾಡಿ ಶ್ರೀರಂಗಪಟ್ಟಣ ಮಸೀದಿಯನ್ನು ನಿರ್ಮಿಸಿದ್ದ ಅಂತಾ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಇದಕ್ಕೆ ಟಕ್ಕರ್ ಎಂಬಂತೆ ನಾಳೆ ಟಿಪ್ಪು ಸುಲ್ತಾನ್ ಸಾಧನೆ, ಯುದ್ಧ, ಇತಿಹಾಸ ಹೇಳುವ ಜಾಥಾ ನಡೆಯಲಿದೆ.
ಶ್ರೀರಂಗಪಟ್ಟಣದ ದರಿಯಾ ದೌಲತ್ನಿಂದ ಗುಂಬಜ್ವರೆಗೆ ನಡೆಯುವ ರ್ಯಾಲಿಯಲ್ಲಿ
ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ.
ಶ್ರೀರಂಗಪಟ್ಟಣ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆ ಮನವಿ ಮಾಡಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ