December 26, 2024

Newsnap Kannada

The World at your finger tips!

BJP , Congress , MLC

ಪಠ್ಯದಿಂದ ಟಿಪ್ಪು ಕಿತ್ತು ಹಾಕಿದರೂ ಭಾರತೀಯರ ಹೃದಯದಿಂದ ಕಿತ್ತು ಹಾಕಲು ಸಾಧ್ಯವೆ ? ವಿಶ್ವನಾಥ್

Spread the love

ಪುಸ್ತಕದಿಂದ ತೆಗೆದರೂ ಟಿಪ್ಪು ಸುಲ್ತಾನ್ ಭಾರತೀಯರ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿ ವಿಶ್ವನಾಥ್ ‘ ಟಿಪ್ಪೂ ಮಾನ್ಯತೆ ಸಿಗದ ಸುಲ್ತಾನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಟಿಪ್ಪು ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿ. ಕೇಸರಿಯನ್ನು ಒಂದು ಧರ್ಮದವರು, ಹಸಿರನ್ನು ಮತ್ತೊಂದು ಧರ್ಮದವರು ಕಿತ್ತುಕೊಂಡಿದ್ದಾರೆ. ಕಾಮಾಲೆ ಕಣ್ಣಿಂದ, ಮತಾಂಧತೆ ಕಣ್ಣಿನಿಂದ ಟಿಪ್ಪುವನ್ನು ನೋಡಬೇಡಿ ಟಿಪ್ಪು ಈ ನಾಡಿನ ಮಣ್ಣಿನ ಮಗ, ಮೈಸೂರು ಹುಲಿ ಟಿಪ್ಪು ಎಂದು ಹಾಡಿ ಹೊಗಳಿದ್ದಾರೆ.

ಟಿಪ್ಪು 80 ಸಾವಿರ ಕೊಡವರನ್ನು ಕೊಂದ ಎಂದು ಹೇಳುತ್ತಾರೆ. 250 ವರ್ಷದ ಹಿಂದೆ ಅಲ್ಲಿ ಅಷ್ಟು ಜನಸಂಖ್ಯೆ ಇತ್ತಾ? ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ಯಾರಿಗೂ ತಲೆ ಬಾಗಿಲ್ಲ. ಯಾರ ಮುಂದೆಯೂ ಮಂಡಿಯೂರದ ಧೀರ. ಶತ್ರುವಿನ ಮುಂದೆ ಶರಣಾಗದ ಟಿಪ್ಪು ಜಗತ್ತಿನ ಏಕೈಕ ವೀರ ಬಣ್ಣಿಸಿದರು.

ನನ್ನ ಅಜೆಂಡಾ ಬದಲಾಗಿದೆ ಅಂತಾರೆ, ಆದರೆ ನನ್ನ ಅಜೆಂಡಾ ಮಾತ್ರ ಒಂದೇ. ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದಾಗಲೂ ಇದನ್ನೇ ಹೇಳಿದ್ದೆ. ಈ ದೇಶದ ಎಲ್ಲಾ ಧರ್ಮ ಗುರುಗಳು ಯಾಕೆ ಮೌನವಾಗಿದ್ದಾರೆ? ಇವತ್ತಿನ ಸ್ಥಿತಿಯನ್ನು ಯಾಕೆ ಖಂಡಿಸುತ್ತಿಲ್ಲ. ಮಠಕ್ಕೆ ಅನುದಾನದ ಕೊಡುತ್ತಾರೆ ಎಂಬ ಕಾರಣಕ್ಕೆ ಸರ್ಕಾರದ ವಿರುದ್ಧ ಮಾತಾಡ್ತಿಲ್ವಾ? ಅನ್ನ ಕಿತ್ತುಕೊಳ್ಳುವ ಕೆಲಸ ರಾಜ್ಯದಲ್ಲಿ ನಡೆಯತ್ತಿದೆ. ಇದರ ವಿರುದ್ಧ ಯಾಕೆ ಧರ್ಮ ಗುರು ಮಾತಾಡ್ತಿಲ್ಲ ಎಂದು ಪ್ರಶ್ನಿಸಿದರು.

Copyright © All rights reserved Newsnap | Newsever by AF themes.
error: Content is protected !!