ಮನೆಯೇ ಮೊದಲ ಪಾಠಶಾಲೆ,
ತಾಯಿ ತಾನೇ ಮೊದಲ ಗುರು,
ಮಕ್ಕಳಿಗೆ ಏಕಾಗ್ರತೆಯ ಪಾಠ ಮನೆಯಿಂದಲೇ ಆರಂಭವಾಗುವುದು.
ಮಗುವಿಗೆ ಏಕಾಗ್ರತೆಯನ್ನು ಕಲಿಸುವುದೂ ಕೂಡ ಪೋಷಕರಿಗೆ ಸವಾಲಿನ ಸಂಗತಿ. ಏಕಾಗ್ರತೆ ಕಲಿಕೆಗೆ ಪೂರಕವಾಗುತ್ತದೆ ಮತ್ತು ಏಕಾಗ್ರತೆ ತಂದು ಕೊಳ್ಳುವುದು ಕೂಡ ಸುಲಭದ ಮಾತಲ್ಲ.
ಮುಗ್ಧ ಮುದ್ದಾದ ಮಕ್ಕಳು ಅವರ ಪ್ರಪಂಚವೇ ನಾವು,
ಅಮ್ಮ ಹೇಳಿದ್ದೇ ಪರಮ ಸತ್ಯ, ಸಾಗುತ್ತಾ ಬೇಕಿದೆ ಅಪ್ಪನ ಸಾರಥ್ಯ,
ನಮ್ಮ ಮೇಲಿದೆ ಅವರ ಅವಲಂಬನೆ,
ಎಳೆಯ ಜೀವಗಳ ಸ್ವಚ್ಛ ಪೋಷಣೆ, ನಮ್ಮ ಹೊಣೆ.
ನಿಮ್ಮ ಮಗುವನ್ನು ಕೇಂದ್ರೀಕರಿಸಲು ಒತ್ತಾಯಿಸಬೇಡಿ. ಬದಲಾಗಿ ಅವರ ಸಾಮರ್ಥ್ಯವನ್ನು ಗುರುತಿಸಿ ಮತ್ತು ಅವರಿಗೆ ಸೂಕ್ತವಾದ ಕಲಿಕಾ ವಿಧಾನವನ್ನು ಪರಿಚಯಿಸಿ. ಜ್ಞಾನವು ಹಲವು ರೂಪಗಳಲ್ಲಿ ಬರಬಹುದು, ಇದು ಪುಸ್ತಕಗಳಿಗೆ ಸೀಮಿತವಾಗಬೇಕಿಲ್ಲ ಎಂಬುದನ್ನು ಪೋಷಕರು ನೆನಪಿಡಬೇಕು. ಇದು ದೃಶ್ಯ, ಕಲಾತ್ಮಕ, ಶ್ರವಣೇಂದ್ರಿಯವಾಗಿರಬಹುದು ಮತ್ತು ನೃತ್ಯ, ಸಂಗೀತವನ್ನು ಕೇಳುವುದು ಮುಂತಾದ ಮೋಜಿನ ಚಟುವಟಿಕೆಗಳು ಸಹ ಮಕ್ಕಳನ್ನು ಹೆಚ್ಚು ಆಕರ್ಷಿಸಬಹುದು. ಇದನ್ನು ಪೋಷಕರು ತಿಳಿಯುವುದು ಮುಖ್ಯ.
ಇದು ವೈಜ್ಞಾನಿಕ ಯುಗ. ತಂತ್ರಜ್ಞಾನ ಬೆಳೆದಂತೆಲ್ಲ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಕಲಿಕೆಯನ್ನು ನಾವು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಕಲಿಕೆಯನ್ನು ನಾವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರ ತಲೆಗೆ ತುಂಬಿಸುವ ಧಾವಂತದಲ್ಲಿ ಇರುತ್ತೇವೆ. ಶಾಲೆಗೆ ಸೇರುವ ಮುನ್ನ ಮಕ್ಕಳು ಎಲ್ಲವನ್ನೂ ಕಲಿತಿರಬೇಕು ಎಂಬ ಉದ್ದೇಶದಿಂದ ಮನೆಯಲ್ಲಿಯೇ ಇಂದು ಶಾಲೆಯ ಅರ್ಧ ಕೆಲಸವಾಗುತ್ತಿದೆ.
ಮನೆಯಲ್ಲಿ ಅರ್ಧ ಕಲಿತು ಶಾಲೆಗೆ ಹೋಗುವ ಮಗು ಇನ್ನು ಅರ್ಧಭಾಗದ ಪಾಠವನ್ನು ಶಿಕ್ಷಕರಿಂದ ಕಲಿಯುತ್ತದೆ. ಕಲಿಕೆಯ ಕಡೆಗೆ ಮಗುವಿನ ಆಸಕ್ತಿಯ ವಿಷಯವಾಗಿ ರೂಪಿಸುವ ಮಾರ್ಗವಾಗಿ, ಇಂದು ಸಂಗೀತಕ್ಷೇತ್ರವನ್ನು ಬಹಳಷ್ಟು ಶಾಲೆಗಳು ಆಯ್ಕೆ ಮಾಡಿಕೊಂಡಿವೆ. ಉದಾಹರಣೆಗೆ ಹೇಳಬೇಕೆಂದರೆ ಮಕ್ಕಳು ನರ್ಸರಿ ಸ್ಕೂಲಿನಲ್ಲಿ ಕಲಿಯುವ ರೈಮ್ಸ್, ಸಂಗೀತ ನೃತ್ಯದ ಮೂಲಕ ಕಲಿಯುವ ಪಾಠಗಳು ಇವೆಲ್ಲಾ ಆಸಕ್ತಿದಾಯಕವಾಗಿ ಮಕ್ಕಳಿಗೆ ತೋರುತ್ತಿದೆ. ಇಲ್ಲಿ ಒಂದು ವೈಜ್ಞಾನಿಕ ಹಿನ್ನೆಲೆಯಿದೆ. ಮಕ್ಕಳಿಗೆ ಸಂಗೀತದ ಮೂಲಕ ಪಾಠವನ್ನು ಹೇಳಿಕೊಟ್ಟರೇ ಮಕ್ಕಳ ಜ್ಞಾನಾರ್ಜನೆಯ ಜೊತೆಗೆ ಮೆದುಳಿನ ಬೆಳವಣಿಗೆ ಸಕರಾತ್ಮಕವಾಗಿ ರೂಪುಗೊಳ್ಳುತ್ತದೆ.
ಪ್ರತಿಯೊಬ್ಬ ಪೋಷಕರಿಗೆ ಮಕ್ಕಳ ಪರೀಕ್ಷೆ ಬಂತೆಂದರೆ ತಾವೇ ಪರೀಕ್ಷೆ ಬರೆಯುವಷ್ಟು ಆತಂಕಕ್ಕೆ ಒಳಗಾಗುತ್ತಾರೆ. ನಮ್ಮ ಮಕ್ಕಳಿಗೆ ಓದಿದ್ದೆಲ್ಲಾ ಪರೀಕ್ಷೆಯಲ್ಲಿ ಚೆನ್ನಾಗಿ ನೆನಪಿಗೆ ಬಂದರೆ ಸಾಕಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮಕ್ಕಳು ಉತ್ತಮ ಅಂಕ ತೆಗೆಯಲು ಬುದ್ಧಿ ಶಕ್ತಿ ಇದ್ದರೆ ಮಾತ್ರ ಸಾಲದು, ಏಕಾಗ್ರತೆ ಬೇಕು. ಏಕ್ರಾಗತೆ ಅನ್ನುವುದು ಕೇವಲ ಮಾರ್ಕ್ಸ್ ತೆಗೆಯಲು ಮಾತ್ರವಲ್ಲ ಜೀವನದಲ್ಲಿ ಪ್ರತಿಯೊಂದು ಕೆಲಸ ಮಾಡುವಾಗ ಏಕಾಗ್ರತೆ ಅವಶ್ಯಕ.
ಆದ್ದರಿಂದ ನಿಮ್ಮ ಮಕ್ಕಳಲ್ಲಿ ಚಿಕ್ಕ ಪ್ರಾಯದಲ್ಲಿಯೇ ಏಕಾಗ್ರತೆ ಬೆಳೆಸಿದರೆ ಒಳ್ಳೆಯದು, ಮಕ್ಕಳಿಗೆ ಪಾಠ ಹೇಳಿಕೊಡುವಾಗ ಜೋರಾಗಿ ಓದಿ, ಅದರ ವಿವರಣೆಯನ್ನು ಉದಾಹರಣೆ ಸಹಿತ ಹೇಳಿಕೊಟ್ಟರೆ ಮಕ್ಕಳಿಗೆ ಆಸಕ್ತಿ ಹೆಚ್ಚಾಗಿ ಏಕಾಗ್ರತೆಯಿಂದ ಕೇಳುತ್ತಾರೆ. ಇದರಿಂದ ನೆನಪಿನ ಶಕ್ತಿ ಹೆಚ್ಚುವುದು.
ಆರೋಗ್ಯಕರ ಆಹಾರವನ್ನು ತಿನ್ನುವುದು ಮಗುವಿನ ಏಕಾಗ್ರತೆಗೆ ನೇರವಾದ ಲಿಂಕ್ ಅನ್ನು ಹೊಂದಿದೆ ಮತ್ತು ಮಗುವಿನ ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ವಿವಿಧ ಆಹಾರಗಳಿವೆ. ಜಂಕ್ ಫುಡ್ ಅಥವಾ ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದು ಮಗುವನ್ನು ನಿಧಾನಗೊಳಿಸುತ್ತದೆ,ಆದರೆ ಬಾದಾಮಿ, ಮೊಟ್ಟೆ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವು ಅರಿವು ಮೂಡಿಸುವ ಮತ್ತು ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ!
ಕೆಫೀನ್ – US ನಲ್ಲಿನ ಇತ್ತೀಚಿನ ಪ್ರವೃತ್ತಿಯು ಮಕ್ಕಳು ತಮ್ಮ ಕಾಫಿ ಮತ್ತು ಕೆಫೀನ್ ಹೊಂದಿರುವ ಶಕ್ತಿ ಪಾನೀಯಗಳ ಸೇವನೆಯನ್ನು ಹೆಚ್ಚಿಸಿದ್ದಾರೆ ಎಂದು ತೋರಿಸುತ್ತದೆ. ಇದು ಅವರಿಗೆ ಅನಾರೋಗ್ಯಕರ ಪ್ರಮಾಣದ ಸಕ್ಕರೆಯನ್ನು ನೀಡುತ್ತದೆ, ಇದು ನಂತರ ಶಕ್ತಿಯ “ಕ್ರ್ಯಾಶ್” ಗೆ ಕಾರಣವಾಗಬಹುದು.
ಹಸಿರು ಆಹಾರ – UKಯ ಅಲ್ಸ್ಟರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಆಸಕ್ತಿದಾಯಕ ಅಧ್ಯಯನವು ಬೆಳಗಿನ ಉಪಾಹಾರಕ್ಕಾಗಿ ಟೋಸ್ಟ್ ಮತ್ತು ಬೇಯಿಸಿದ ಬೀನ್ಸ್ ಅನ್ನು ತಿನ್ನುವುದು ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ತೋರಿಸುತ್ತದೆ. ತಜ್ಞರು ಹೇಳುವಂತೆ ಗ್ರೀನ್ಸ್ ಮತ್ತು ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಉತ್ಕರ್ಷಣ ನಿರೋಧಕಗಳು ಹೆಚ್ಚುತ್ತವೆ, ಇದು ಮಕ್ಕಳ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಕ್ಕಳಲ್ಲಿ ಏಕಾಗ್ರತೆ ಬೆಳೆಸುವಲ್ಲಿ ಈ ಕೆಳಗಿನ ಚಟುವಟಿಕೆಗಳು ಸಹಾಯ ಮಾಡುತ್ತವೆ:
ಮೇಣದ ಬತ್ತಿ ಹಚ್ಚಿ ನಿಮ್ಮ ಮಗುವಿನ ಹತ್ತಿರ 3 ನಿಮಿಷ ಆ ಬೆಳಕನ್ನೇ ನೋಡಲು ಹೇಳಿ, ಮಗು ಅದರ ಮೇಲೆ ದೃಷ್ಟಿ ಇಟ್ಟು ನೋಡುತ್ತಿದ್ದಂತೆ ಏಕಾಗ್ರತೆ ಸಾಮರ್ಥ್ಯ ಹೆಚ್ಚುವುದು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಇದೊಂದು ಉತ್ತಮವಾದ ವಿಧಾನವಾಗಿದೆ. ನಾಣ್ಯ ಮೇಣದ ಬತ್ತಿಯನ್ನು ದಿಟ್ಟಿಸಿ ನೋಡುವಂತೆಯೇ ನಿಮ್ಮ ಮಗುವಿನ ಮುಂದೆ ನಾಣ್ಯ ಹಾಕಿ ಅತ್ತ- ಇತ್ತ ನೋಡದೆ ನಾಣ್ಯವನ್ನು 5 ನಿಮಿಷ ನೋಡಲು ಹೇಳಿ, ಮಗು ಹೀಗೆ ಮಾಡಿದಾಗ ಅವರನ್ನು ಹುರಿದುಂಬಿಸಿ, ಈ ವಿಧಾನವು ಮಕ್ಕಳಲ್ಲಿ ಏಕಾಗ್ರತೆ ಸಾಮರ್ಥ್ಯವನ್ನು ಹೆಚ್ಚಿಸುವುದು.
ಹೈಪರ್ ಆಕ್ಟಿವ್ ಮಕ್ಕಳಲ್ಲಿ ಏಕಾಗ್ರತೆ ಕಮ್ಮಿ ಇರುತ್ತದೆ, ತಕ್ಷಣ ಕೋಪಗೊಳ್ಳುವುದು, ಗಲಾಟೆ ಮಾಡುವುದು ಹೀಗೆ ಅವರ ರಂಪಾಟಗಳಿಗೆ ಮಿತಿ ಇರುವುದಿಲ್ಲ, ಇಂತಹ ಮಕ್ಕಳನ್ನು ಪ್ರೀತಿಯಿಂದ ತಿದ್ದಬೇಕು, ಹಾಗೇ ಮಾಡಿದರೆ ಅವರಲ್ಲಿ ಏಕಾಗ್ರತೆ ಸಾಮರ್ಥ್ಯ ಹೆಚ್ಚುವುದು.
ಯಾವುದೇ ಗುರಿ ಮುಟ್ಟಲು ನಮಗೆ ಅದರ ಬಗ್ಗೆ ಕನಸ್ಸು ಇರಬೇಕು, ಮಗುವಿನಲ್ಲಿ ಉತ್ತಮವಾದ ಕನಸ್ಸುಗಳನ್ನು ತುಂಬಿ, ಆಗ ಅವರು ತಮ್ಮ ಗುರಿ ಮುಟ್ಟಲು ಪ್ರಯತ್ನಿಸುತ್ತಾರೆ.
ಕೆಲವೊಂದು ಆಟಗಳು ಚೆಸ್, ಹಾವು-ಏಣಿ ಆಟ, ಲುಡಾ ಈ ರೀತಿಯ ಆಟ ಆಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುವುದು. ಅಲ್ಲದೆ ಸ್ಲೋರ್ಟ್ಸ್ ನಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ, ಸ್ಪೋರ್ಟ್ಸ್ ಕೂಡ ಮಕ್ಕಳಲ್ಲಿ ಏಕಾಗ್ರತೆಯ ಸಾಮರ್ಥ್ಯ ಹೆಚ್ಚಿಸುವುದು.
ಏಕಾಗ್ರತೆಯ ಅಗತ್ಯವಿರುವ ಆಟ ಮತ್ತು ಒಗಟುಗಳನ್ನು ಪರಿಚಯಿಸಿ ಮಕ್ಕಳು ಮುಗ್ಧರಾಗಿದ್ದರೂ, ಅವರ ಮನಸ್ಸಿಗೆ ಜ್ಞಾನವನ್ನು ಸುಲಭವಾಗಿ ಗ್ರಹಿಸುವ ಶಕ್ತಿ ಇದೆ. ಅವರ ಏಕಾಗ್ರತೆಯನ್ನು ಸುಧಾರಿಸಲು, ಸದಾ ಚಟುವಟಿಕೆಯಿಂದ ಇರುವಂಥ ಆಟ ಆಡಲು ಪ್ರೇರಣೆ ನೀಡಿ, ಗಮನ ಮತ್ತು ಏಕಾಗ್ರತೆಯ ಅಗತ್ಯವಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು.
ಮಕ್ಕಳಿಗೆ ಉಡುಗೊರೆ ನೀಡಿ ಪ್ರೋತ್ಸಾಹಿಸಿ,ಇದು ಮಕ್ಕಳಲ್ಲಿ ಸಕಾರಾತ್ಮಕವಾಗಿ ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ಬಹುಮಾನಗಳು ಕೇವಲ ಹಣವಾಗಿರಬೇಕಾಗಿಲ್ಲ, ನೆನಪಿನ ಶಕ್ತಿ ವೃದ್ಧಿಸುವಂಥ ಆಟಿಕೆಗಳು, ಮಕ್ಕಳಿಗೆ ಇಷ್ಟವಾಗುವಂಥ ಹೊಗಳಿಕೆಯ ಮಾತುಗಳು ಒಟ್ಟಾರೆ ಮಕ್ಕಳಿಗೆ ಇಷ್ಟವಾಗುವ ವಸ್ತುಗಳನ್ನು ನೀಡುವುದು. ಇದು ಮುಂದಿನ ಬಾರಿ ಅವರಿಗೆ ಇನ್ನಷ್ಟು ಆಧ್ಯಯನದತ್ತ ಗಮನಹರಿಸಲು ಪ್ರೇರಣೆ ನೀಡುತ್ತದೆ. ತಮ್ಮ ಕೆಲಸವನ್ನು ಹೆಚ್ಚು ಏಕಾಗ್ರತೆಯಿಂದ, ಹೆಚ್ಚು ಶ್ರದ್ಧೆಯಿಂದ ಮುಗಿಸಲು ಗಮನಹರಿಸುತ್ತಾರೆ.
ಮಗುವಿನ ಅಭಿರುಚಿ ಸಂಗೀತದ ಮೂಲಕ ಓದುವ ಹವ್ಯಾಸವನ್ನು ಬೆಳೆಸುತ್ತದೆ.
ಬೆಳವಣಿಗೆ ಹಂತದಿಂದ ಇಂಥ ಹವ್ಯಾಸಗಳಿಗೆ ರೂಢಿ ಮಾಡಿಸಿದರೆ ಮಗುವಿನಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸುತ್ತದೆ.
ಸಂಗೀತವನ್ನು ಕೇಳುತ್ತಾ ಕಲಿಕೆ ಆರಂಭಿಸುವ ಮಗುವಿಗೆ ಮಗುವಿನ ಏಕಾಗ್ರತೆ ಹೆಚ್ಚುತ್ತದೆ.
ಮಗುವಿನ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
ಹಾಡಿನ ಲಯ ಶ್ರುತಿ ಅದರ ಸಾಹಿತ್ಯದ ಮೇಲೆ ಏಕಾಗ್ರತೆ ವಹಿಸುವ ಮಗುವಿಗೆ ತನ್ನ ವರ್ತನೆ ಮತ್ತು ಭಾಷೆಯ ಅಭಿವ್ಯಕ್ತಿ ಕೂಡ ಬೆಳವಣಿಗೆಯಾಗುತ್ತದೆ.
ತುಂಬಾ ಕೆಲಸಗಳನ್ನು ಜೊತೆಯಲ್ಲಿ ಮಾಡಲು ಕೊಡಬೇಡಿ ಮಗು ಆಡುತ್ತಿರುವ ಸಮಯದಲ್ಲಿ ಓದು ಅಂತ, ಓದುತ್ತಿರುವಾಗ ಹೋಂವರ್ಕ್ ಮಾಡು ಅಂತ ಹೀಗೆ ನಾನಾ ಕೆಲಸಗಳನ್ನು ಜೊತೆಯಲ್ಲಿಯೇ ಹೇಳಬೇಡಿ. ಮಗು ಏನಾದರೂ ಆಡುತ್ತಿದ್ದರೆ ಆ ಆಟ ಮುಗಿದ ಬಳಿಕ ಓದಲು ಹೇಳಿ, ಈ ರೀತಿ ಮಾಡಿದರೆ ಮಗುವಿಗೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಹೆಚ್ಚುವುದು.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
Tips To Improve Children’s Concentration
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್