KSRTC ಬಸ್ ನಲ್ಲಿ 3 ವರ್ಷದ ಮಗುವಿಗೂ ಹಾಫ್‌ ಟಿಕೆಟ್‌! ಹೊಸ ನಿಯಮ ಜಾರಿ

Team Newsnap
1 Min Read

ಆರು ವರ್ಷ ಮೇಲ್ಪಟ್ಟಿದ್ದರೆ ಮಾತ್ರವಲ್ಲ, ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಇನ್ನು ಮುಂದೆ ಮೂರು ವರ್ಷದ ಮಗುವಿಗೂ ಕೂಡ ಅರ್ಧ ಟಿಕೆಟ್‌ ಪಡೆಯಬೇಕು.

ಈ ಹಿಂದೆ ಬಸ್‌ಗಳಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. 6-12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್‌ ನೀಡಲಾಗುತ್ತಿತ್ತು. ಈಗ ವಯಸ್ಸನ್ನು ಆಧರಿಸಿ ಟಿಕೆಟ್‌ ಪಡೆಯುತ್ತಿಲ್ಲ. ಬದಲಿಗೆ ಮಗುವಿನ ಎತ್ತರ ಆಧರಿಸಿ ಟಿಕೆಟ್‌ ನೀಡಲಾಗುತ್ತದೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ಅಥವಾ ಮೂರು ವರ್ಷವೇ ಆಗಿರಲಿ. ಅಂತಹ ಪೋಷಕ ಪ್ರಯಾಣಿಕರಿಂದ ಅರ್ಧ ಟಿಕೆಟ್‌ನ ಹಣ ಪಡೆದು ಟಿಕೆಟ್‌ ಕೊಡಲಾಗುತ್ತಿದೆ. ಇಂಥದೊಂದು ವ್ಯವಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಲ್ಲಿ ಜಾರಿಗೆ ಬಂದಿದೆ.

ಇದನ್ನು ಓದಿ :ಮೇ 19ಕ್ಕೆ SSLC ಫಲಿತಾಂಶ ಪ್ರಕಟ

ಮಕ್ಕಳ ಎತ್ತರ ನೋಡಲು ಬಸ್‌ನ ಮಧ್ಯದಲ್ಲಿರುವ ಸರಳುಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿಗೆ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್‌ ನೀಡಲಾಗುತ್ತಿದೆ.

ಹತ್ತಿರದ ಊರುಗಳಿಗೆ ಪ್ರಯಾಣ ಬೆಳೆಸುವುದಾದರೆ ಪುಟಾಣಿ ಮಕ್ಕಳಿಗೆ ಟಿಕೆಟ್‌ ತೆಗೆದುಕೊಂಡರೂ ಹೊರೆಯಾಗುವುದಿಲ್ಲ. ಆದರೆ ಬೆಂಗಳೂರಿನಿಂದ ಮೈಸೂರು, ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು, ಮಡಿಕೇರಿ, ಹಾಸನ ಹೀಗೆ ದೂರದ ಊರುಗಳಿಗೆ ತೆರಳುವುದಾದರೆ ವಯಸ್ಕ ಪ್ರಯಾಣಿಕರಿಗೆ 150-300 ರೂ.ವರೆಗೆ ಟಿಕೆಟ್‌ ದರವಿರುತ್ತದೆ. ಅದರಲ್ಲೂ ಸ್ಲೀಪರ್‌ ಕೋಚ್‌ಗಳಲ್ಲಿ ಟಿಕೆಟ್‌ ದರ ದುಪ್ಪಟ್ಟಾಗಿರುತ್ತದೆ. ಇಂತಹ ವೇಳೆ ಮಕ್ಕಳಿಗೆ ಅರ್ಧ ಟಿಕೆಟ್‌ ತೆಗೆದುಕೊಳ್ಳುವುದು ಹೊರೆಯಾಗುತ್ತದೆ.

Share This Article
Leave a comment