Karnataka

ಗುಡುಗಿದ ಸಿಎಂ – ಡಿಸಿ ಕಚೇರಿ ಸ್ಥಳಾಂತರ

  • ಒಂದೇ ದಿನಕ್ಕೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಹೊಸ ಕಟ್ಟಡಕ್ಕೆ ಶಿಪ್ಟ್
  • ಕಾಮಗಾರಿ ಪೂರ್ಣಗೊಂಡಿದ್ದರೂ ಕಚೇರಿ ಮಾತ್ರ ಸ್ಥಳಾಂತರವಾಗಿರಲಿಲ್ಲ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗು ಹಾಕಿದ ಮರು ಕ್ಷಣವೇ ಬನ್ನೂರು ಮುಖ್ಯ ರಸ್ತೆಯ ಸಿದ್ದರ್ಥಾ ನಗರದಲ್ಲಿರುವ ಉದ್ಘಾಟನೆಯಾದರೂ ಸ್ಥಳಾಂತರಗೊಳ್ಳದ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಗುರುವಾರ ತರಾತುರಿಯಲ್ಲಿ ಸ್ಥಳಾಂತರ ಮಾಡಲಾಗಿದೆ.

ಇದುವರೆಗೂ ಪಾರಂಪರಿಕ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಇಂದು ತಮ್ಮ ಕಚೇರಿಯನ್ನು ಸ್ಥಳಾಂತರ ಮಾಡಿಕೊಂಡು ಕೆಲಸ ಆರಂಭಿಸಿದರು.

2016 ರ ಅಕ್ಟೋಬರ್ ನಲ್ಲಿ ಹೊಸ ಡಿಸಿ ಕಚೇರಿಯನ್ನು ನಿರ್ಮಿಸಲು 84.‍‍66 ಕೋಟಿ ವೆಚ್ಚದ ಕಟ್ಟಡಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ನವರೇ ಶಂಕು ಸ್ಥಾಪನೆ ಮಾಡಿದ್ದರು. ನಂತರ 2018 ರಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಿದ್ದರೂ ಕೂಡ ಡಿಸಿ ಕಚೇರಿ ಮಾತ್ರ ಸ್ಥಳಾಂತರಗೊಂಡಿರಲಿಲ್ಲ. ಮೈಸೂರು-ಬನ್ನೂರು ರಸ್ತೆಯಲ್ಲಿರುವ ಡಿಸಿ ಕಚೇರಿ ಕಟ್ಟಡವು ಅದರ ವಾಸ್ತುಶಿಲ್ಪದಲ್ಲಿ ಲಲಿತ ಮಹಲ್ ಅರಮನೆಯನ್ನು ಹೋಲುತ್ತದೆ. ಜಿಲ್ಲಾಡಳಿತವು ನಗರದ ಹೃದಯಭಾಗದಲ್ಲಿರುವ ಶತಮಾನದಷ್ಟು ಹಳೆಯದಾದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಲೇ ಇತ್ತು. ಹಂತ ಹಂತವಾಗಿ ಕಚೇರಿಗಳನ್ನು ಬದಲಾಯಿಸುವ ಆಲೋಚನೆ ಇತ್ತು.

ಆರು ಇಲಾಖೆಗಳು ಸ್ಥಳಾಂತರ:

ಈ ಹಿಂದೆ ಜೂನ್ 2020 ರಲ್ಲಿ ಹಳೆಯ ಡಿಸಿ ಆಫೀಸ್ ಕಟ್ಟಡ ದಿಂದ ಸಿದ್ದಾರ್ಥನಗರದ ಹೊಸ ಕಚೇರಿಗೆ ಭೂದಾಖಲೆಗಳ ಉಪನಿರ್ದೇಶಕರ ಕಛೇರಿಗಳು. ಜಿಲ್ಲಾ ನಗರಾಭಿವೃದ್ಧಿ ಕೇಂದ್ರ, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಮುಜರಾಯಿ ಇಲಾಖೆ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿತ್ತು

ನೂತನ ಡಿಸಿ ಕಚೇರಿ ಕಾಂಪ್ಲೆಕ್ಸ್ ನೆಲಮಹಡಿ ಸೇರಿದಂತೆ ಮೂರು ಅಂತಸ್ತಿನ ರಚನೆಯಾಗಿದೆ. ಪಾರ್ಕಿಂಗ್‌ಗೆ ಸೆಲ್ಲಾರ್ ಜೊತೆಗೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿದ್ದ ವಿಶಾಲವಾದ ಕೊಠಡಿಯಲ್ಲಿ ಡಿಸಿ ಕಚೇರಿಯನ್ನು ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿದೆ. ಕೊಠಡಿಯನ್ನು ಕೋರ್ಟ್ ಹಾಲ್ ಆಗಿ ಪರಿವರ್ತಿಸಲಾಗಿದೆ (ಆದರೆ ಇನ್ನೂ ಕಾರ್ಯ ಆರಂಭವಾಗಿಲ್ಲ) ಅಲ್ಲಿ ಡಿಸಿ ತಮ್ಮ ಜಿಲ್ಲಾ ನ್ಯಾಯಾಧೀಶರ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳ ವಿಚಾರಣೆ ಮಾಡಲಿದ್ದಾರೆ.

ಶತಮಾನ ಕಂಡ ಕಟ್ಟಡ ಮ್ಯೂಜಿಯಂ -ಡಿಸಿ

ಡಿಸಿ ಕಚೇರಿಯ ಹಳೆಯ ಕಟ್ಟಡವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಕುರಿತು ಚಿಂತನೆ ನಡೆದಿದೆ.
ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ. ಮಾಡಲಾಗುವುದು ಎಂದು ಡಿಸಿ ರಾಜೇಂದ್ರ ನ್ಯೂಸ್ ಸ್ನ್ಯಾಪ್ ಗೆ ತಿಳಿಸಿದರು.

ಯೋಜನೆಗಳ ಬಗ್ಗೆ ವಿವರಿಸಿದ ಡಿಸಿ, “ಹಳೆಯ ಡಿಸಿ ಕಚೇರಿಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಮೂಲಕ ಶತಮಾನ ಕಂಡ ರಾಜವಂಶಸ್ಥರ ಕಾಲದ ಈ ಕಟ್ಟಡದಲ್ಲಿ ಕಂದಾಯ ದಾಖಲೆಗಳು, ಪಾರಂಪರಿಕ ಮಹತ್ವವುಳ್ಳ ಐತಿಹಾಸಿಕ ಸ್ಮಾರಕಗಳು ಮತ್ತು ಮೈಸೂರನ್ನು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಎತ್ತಿ ತೋರಿಸುವ ಹಲವಾರು ಪ್ರದರ್ಶನಗಳನ್ನು ಪ್ರದರ್ಶಿಸಬಹುದು. ಆ ಕಟ್ಟಡದ ಬಳಕೆ ಮತ್ತು ನಿರ್ವಹಣೆ ಕುರಿತು ಸಿಎಂ ಜೊತೆ ಜಿಲ್ಲಾಡಳಿತ ಚರ್ಚಿಸಲಿದೆ ಎಂದರು.ವಂಚನೆ, ಕಿರುಕುಳಕ್ಕೆ ನೊಂದು ಗೃಹಪ್ರವೇಶವಾದ ಮನೆಯಲ್ಲಿಯೇ ಯುವತಿ ಆತ್ಮಹತ್ಯೆ

ಸಿಎಂ ಸಿದ್ಧರಾಮಯ್ಯನವರ ನಿರ್ದೇಶನದ ಮೇರೆಗೆ, ಜಿಲ್ಲಾಧಿಕಾರಿಗಳು ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಮೀಷನರ್ (AC) ಕಚೇರಿಗಳನ್ನು ಹೊಸ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ. ಖಜಾನೆ ಮತ್ತು ನ್ಯಾಯಾಲಯವನ್ನು ಹೊರತುಪಡಿಸಿ, ಹಳೆಯ ಡಿಸಿ ಕಚೇರಿಯಲ್ಲಿ ಉಳಿದ ಕಚೇರಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯು ಖಜಾನೆ ಸ್ಥಳಾಂತರಗೊಳ್ಳುವ ಮೊದಲು ಒಂದು ವಾರದಲ್ಲಿ ಪೂರ್ಣಗೊಳ್ಳುತ್ತದೆ.

ಡಾ. ಕೆ ವಿ ರಾಜೇಂದ್ರ ಜಿಲ್ಲಾಧಿಕಾರಿಗಳು ಮೈಸೂರು

Team Newsnap
Leave a Comment

Recent Posts

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024

ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಅಮಾನತು

ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More

April 30, 2024

ನಾಳೆಯಿಂದ 14 ಕ್ಷೇತ್ರಗಳಲ್ಲಿ 2ನೇ ಹಂತದ ಅಂಚೆ ಮತದಾನ

ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ… Read More

April 30, 2024

SSLC ಪರೀಕ್ಷೆ : ಮೇ.10ರಂದು ಫಲಿತಾಂಶ ಪ್ರಕಟ

ಬೆಂಗಳೂರು : ಮೇ 10ರಂದು - ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು… Read More

April 30, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More

April 30, 2024

5 ವಿದ್ಯಾರ್ಥಿಗಳ ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ

ರಾಮನಗರ : ಮೇಕೆದಾಟು (Mekedatu) ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ… Read More

April 29, 2024