ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೈಲ್ ಮಾಡಲು ಬೆಂಗಳೂರಿನ ಮಹದೇವಪುರ ಸಮೀಪ ದೊಡ್ಡ ಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ಜರುಗಿದೆ. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಐವರು ಹೋಗಿದ್ದರು.
ಇಮ್ರಾನ್ (19), ಮುಭಾರಕ್ (18), ಹಾಗೂ ಶಾಹಿಲ್ (18) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಬ್ದುಲ್ ರೆಹಮಾನ್(18) ಹಾಗೂ ಶಾಹೀದ್ (17) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರೆಲ್ಲಾ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ನಾಗಾವಾರದ ಸಾರಾಯಿ ಪಾಳ್ಯದ ಯುವಕರು ದೊಡ್ಡಗುಬ್ಬಿ ಕೆರೆಗೆ ಈಜಲು ಹೋಗಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗಿ ಮೂವರು ಯುವಕರು ಕಾಣೆಯಾಗಿದ್ದಾರೆ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್‍ಗೆ ಬಂಧನ: ಜೈಲು
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು, ಸ್ನೇಹಿತರು ಕಳೆದ ವಾರ ಮೃತ ಯುವಕರ ಸ್ನೇಹಿತರು ಕೆರೆ ಈಜಲು ಬಂದು ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ನೋಡಿದ್ದ ಯುವಕರು ಮತ್ತೆ ಕೆರೆಗೆ ಈಜಲು ಬಂದು ವಿಡಿಯೋ ಮಾಡಲು ಹೋಗಿ ದುರಂತ ಸಂಭವಸಿದೆ ಎನ್ನಲಾಗಿದೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್