ಗುತ್ತಿಗೆದಾರರೊಬ್ಬರಿಂದ 8 ಸಾವಿರ ಲಂಚ ಸ್ವೀಕರಿಸುವ ಮುನ್ನ ಕೆ ಆರ್ ಎಸ್ ನ ಕಾವೇರಿ ನೀರಾವರಿ ನಿಗಮದ ಮೂವರು ನೌಕರರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಾವೇರಿ ನೀರಾವರಿ ನಿಗಮದ ಹಣಕಾಸು ವಿಭಾಗದ ಅಧೀಕ್ಷಕ ಕರೀಗೌಡ, ಲೆಕ್ಕಾಧಿಕಾರಿ ರಾಮಚಂದ್ರ ಹಾಗೂ ಪ್ರಥಮ ದರ್ಜೆ ಗುಮಾಸ್ತ ಸುರೇಶ್ ಅವರುಗಳೇ ಲಂಚ ಸ್ವೀಕರಿಸುವ ಮುನ್ನ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಸಚಿನ್ ಕೃಷ್ಣಮೂರ್ತಿ ಎಂಬುವವರು ಅಂದಾಜು ಒಂದೂವರೆ ಲಕ್ಷದ ಕಾಮಗಾರಿ ಮಾಡಿದ್ದರು. ಈ ಕಾಮಗಾರಿಯ ಬಿಲ್ ಪಾವತಿಗಾಗಿ ಈ ಮೂವರು 8 ಸಾವಿರ ಬೇಡಿಕೆ ಇಟ್ಟಿದ್ದರು.
ಈ ಲಂಚದ ಹಣ ಸ್ವೀಕಾರ ಮಾಡುವ ಮುನ್ನ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ