DOLO 650 ಬರೆಯಲು ವೈದ್ಯರಿಗೆ ಸಾವಿರಾರು ಕೋಟಿ ರು ಲಂಚ – ಕೋರ್ಟ್ ಗೆ ದೂರು

Team Newsnap
1 Min Read

ಕೊರೊನಾ ಸಮಯದಲ್ಲಿ ಅತಿ ಹೆಚ್ಚು ಬಳಕೆಯಾದ DOLO 650 ಮಾತ್ರೆ ಉತ್ಪಾದಕ ಸಂಸ್ಥೆಯು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ವೈದ್ಯರಿಗೆ ಸಾವಿರಾರು ನಗದು ಹಾಗೂ ಉಚಿತ ಉಡುಗೊರೆಗಳನ್ನು ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ವೈದ್ಯರು ರೋಗಿಗಳಿಗೆ ಡೋಲೊ 650 ಮಾತ್ರೆಯನ್ನೇ ನಿರ್ದೇಶಿಸುವಂತೆ ಮಾಡಲು ಒಟ್ಟು 1000 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು ಸಂಸ್ಥೆ ವೈದ್ಯರಿಗೆ ನೀಡಿದೆ ಎಂದು ಸಂಘವು ದೂರಿದೆ.

ದೇಶದಲ್ಲಿ ಔಷಧಗಳ ಬೆಲೆ ನಿಯಂತ್ರಣ ವಿಚಾರದಲ್ಲಿ ಸಂಘವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಔಷಧೀಯ ಸಂಸ್ಥೆಗಳು ವೈದ್ಯರಿಗೆ ಉಚಿತ ಉಡುಗೊರೆಗಳನ್ನು ಲಂಚದ ರೂಪದಲ್ಲಿ ಕೊಡುತ್ತಿವೆ ಎಂದು ಸಂಘ ದೂರಿದ್ದು, ಅದಕ್ಕೆ ಡೋಲೊ 650 ಅನ್ನು ಉದಾಹರಣೆಯಾಗಿದೆ.

ಸದ್ಯ ಔಷಧೀಯ ಸಂಸ್ಥೆಗಳಿಗೆ ನಿಯಮಗಳನ್ನು ಮಾಡುವಂತೆ ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

Share This Article
Leave a comment