ಬಾಳೆಕಾಯಿ ತಿನ್ನುಲು ಇಷ್ಟ ಇಲ್ಲದೆ ಇರುವವರು ಈ ರೀತಿ ಮಾಡಿ ನೋಡಿ.

Team Newsnap
1 Min Read

▪️ರಾ ಬನಾನ ಕೋಫ್ತ▪️

▪️ಬೇಕಾದ ಪದಾರ್ಥಗಳು▪️

  1. ಬಾಳೆಕಾಯಿ 2
  2. ಈರುಳ್ಳಿ 2
  3. ಕೊತ್ತಂಬರಿಸೊಪ್ಪು ಸ್ವಲ್ಪ
  4. ಹಸಿಮೆಣಸಿನಕಾಯಿ 2
  5. ಕಡಲೇ ಹಿಟ್ಟು 2 ಚಮಚ
  6. ಅರಿಶಿಣ ಪುಡಿ ಕಾಲ್ ಚಮಚ
  7. ಖಾರದ ಪುಡಿ ಅರ್ಧ ಚಮಚ
  8. ರುಚಿಗೆ ತಕ್ಕಷ್ಟು ಉಪ್ಪು
  9. ಎಣ್ಣೆ ಶಾಲು ಫ್ರೈ ಮಾಡಲು

▪️ರುಬ್ಬಲು▪️

  1. ಟೋಮೋಟೋ 2
  2. ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ

▪️ಒಗ್ಗರಣೆಗೆ▪️

  1. ಸಾಸಿವೆ ಅಧ೯ ಚಮಚ
  2. ಎಣ್ಣೆ 4 ಚಮಚ
  3. ಒಣಮೆಣಸಿನಕಾಯಿ 1
  4. ಹಸಿಮೆಣಸಿನಕಾಯಿ 1
  5. ಈರುಳ್ಳಿ 1
  6. ಕೊತ್ತಂಬರಿ ಪುಡಿ 1 ಚಮಚ
  7. ಕೊತ್ತಂಬರಿ ಸೊಪ್ಪು ಸ್ವಲ್ಪ
  8. ಉಪ್ಪು ರುಚಿಗೆ ತಕ್ಕಷ್ಟು

▪️ವಿಧಾನ▪️

ಮೊದಲಿಗೆ 1 ಅಗಲವಾದ ಪಾತ್ರೆಯಲ್ಲಿ 2 ಬಾಳೆಕಾಯಿ ಇಟ್ಟು ಮುಳುಗುವಷ್ಟು ನೀರು ಹಾಕಿ 10 ನಿಮಿಷಗಳ ಕಾಲ ಬೇಯಿಸಿ ಆರಿದ ನಂತರ 1 ಬಟ್ಟಲಿನಲ್ಲಿ ಬಾಳೆಕಾಯಿಯ ಸಿಪ್ಪೆ ತೆಗೆದು ಚನ್ನಾಗಿ ಕಿವಿಚಿ ಅದಕ್ಕೆ ಕಡಲೇ ಹಿಟ್ಟು ಕಟ್ ಮಾಡಿದ ಈರುಳ್ಳಿ,ಅರಿಶಿಣ ಪುಡಿ,ಖಾರದ ಪುಡಿ ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.

ನಂತರ 1 ಬಾಣಲಿಗೆ 4 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಈರುಳ್ಳಿ ಮೆಣಸಿನಕಾಯಿ,ಕರೀಬೇವು ಕೊತ್ತಂಬರಿ ಪುಡಿ ರುಚಿಗೆ ತಕ್ಕಷ್ಟು ಉಪ್ಪು,ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ ಬಾಡಿಸಿ,ರುಬ್ಬಿಕೊಂಡ ಟೋಮೋಟೋ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕುದಿಸಿ ಈ ಮಧ್ಯೆ ಶಾಲು ಫ್ರೈ ಮಾಡಿದ ಬಾಳೆಕಾಯಿ ಉಂಡೆಗಳನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು 1 ಸುತ್ತು ಕುದಿಸಿ ಕೈಯಾಡಿಸಿ ಸ್ಟವ್ ನಿಲ್ಲಿಸಿದರೆ,ಚಪಾತಿ,ಅನ್ನ, ರೊಟ್ಟಿ,ಮುದ್ಥೆಯ ಜೊತೆಗೆ ರುಚಿಯಾದ ಬಾಳೆಕಾಯಿ ಕೋಫ್ತ ಸವಿಯಲು ಸಿದ್ಧ.

vijaya sudarshan

ಕೆ ವಿಜಯಸುದರ್ಶನ್
ಅರಳುಮಲ್ಲಿಗೆ

Share This Article
Leave a comment