ಆರ್ಯನ್ ಖಾನ್ ಗೆ ಆ. 20ರ ತನಕ ಜೈಲು ವಾಸವೇ ಗತಿ : ಕಾಯ್ದಿರಿಸಿದ ಜಾಮೀನು ತೀರ್ಪು

Team Newsnap
1 Min Read

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಅ. 20ರ ವರೆಗೆ ಜೈಲು ವಾಸವೇ ಗತಿ. ಸೆಷನ್ಸ್ ನ್ಯಾಯಾಲಯವು ಜಾಮೀನು ತೀಪ೯ನ್ನು ಕಾಯ್ದಿರಿಸಿದೆ

ಆಯ೯ನ್ ಖಾನ್ ಸಲ್ಲಿಸಿದ್ದ ಜಾಮೀನು ಅಜಿ೯ಯ ವಾದಗಳನ್ನು ಆಲಿಸಿದ ಸೆಷನ್ಸ್ ಕೋಟ್೯ ಜಾಮೀನು ತೀಪ೯ನ್ನು ಅ. 20 ಕ್ಕೆ ಕಾಯ್ದಿರಿಸಿದೆ.

ಎನ್ ಬಿಸಿ ವಾದ ಏನು ? ;

ಕಳೆದ ಮೂರು ವರ್ಷಗಳಿಂದ ಆರ್ಯನ್ ಖಾನ್ ಡ್ರಗ್ ಸೇವಿಸುತ್ತಿದ್ದಾರೆ ಎಂದು ಎನ್‍ಬಿಸಿ ಪರ ವಕೀಲರು ವಾದಿಸಿದರು,

ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಎಎಸ್‍ಜಿ ಅನಿಲ್‌ ಸಿಂಗ್‌ ಮಹತ್ವದ ಅಂಶದೊಂದಿಗೆ ವಾದ ಆರಂಭಿಸಿದ್ದಾರೆ.

ಇಂದು ವಾದ ಆಲಿಸಿದ ಎನ್‍ಸಿಬಿ ಪರ ವಕೀಲ ಅನೀಲ್ ಸಿಂಗ್, ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕರಣ ಮೂರು ವರ್ಷದಿಂದ ಮಾಧಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಬಳಿಕ ಮಾದಕ ವಸ್ತು ಪತ್ತೆಯಾಗಿದ್ದು, ಆರ್ಯನ್ ಖಾನ್ ಕೂಡಾ ಮಾದಕ ವ್ಯಸನಿ ಎನ್ನುವುದು ಸೂಚಿಸುತ್ತಿದೆ ಎಂದು ವಾದಿಸಿದ್ದಾರೆ.

Best Convention Hall in Mandya

ಆರೋಪಿಗೆ ಇರಬಹುದಾದ ಪ್ರಕರಣದ ನಂಟನ್ನು ಭೇದಿಸಬೇಕಿದೆ. ಹೀಗಾಗಿ ಇದು ಒಂದು ವರ್ಷದ ಶಿಕ್ಷೆಯ ಪ್ರಕರಣವೂ ಎನ್ನುವಂತಿಲ್ಲ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಅನಿಲ್ ಸಿಂಗ್ ಕೋರ್ಟ್ ಗೆ ಮನವಿ ಮಾಡಿಕೊಂಡರು.

Share This Article
Leave a comment