January 4, 2025

Newsnap Kannada

The World at your finger tips!

c press

ಕಾಂಗ್ರೆಸ್ ನ ಗೆಲುವಿಗೆ ಈ ಗೆಲುವು ದಿಕ್ಸೂಚಿ – ಚೆಲುವರಾಯಸ್ವಾಮಿ

Spread the love

ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಗಳಿಸಿರುವುದು 2023ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಯಾಗಿದೆ ಎಂದು ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಚಲುವರಾಯಸ್ವಾಮಿ ಶುಕ್ರವಾರ ಅಭಿಪ್ರಾಯಪಟ್ಟರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಜಿಲ್ಲೆಯ ಹಿರಿಯ ಮಾಜಿ ಸಚಿವ ರಾಜಕೀಯ ಮುತ್ಸದಿ ಜಿ ಮಾದೇಗೌಡ ಸೇವೆಯನ್ನು ಗೌರವಿಸಿ ಪ್ರಬುದ್ಧ ಪದವೀಧರ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರು ದಾಖಲೆಯ ಮತಗಳಿಂದ ಗೆಲ್ಲಿಸಿದ್ದಾರೆ, ಗೆಲುವಿಗೆ ಕಾರಣರಾದ ಮಂಡ್ಯ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಗಳ ನಾಯಕರುಗಳು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದಾಗಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾಯಿಸಲಾಗಿದೆ ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರ ಪಾತ್ರವು ಏನೂ ಇಲ್ಲ. ವಿನಾಕಾರಣ ಕಾಂಗ್ರೆಸ್ಸನ್ನು ಅಪಮಾನ ಗೊಳಿಸಬೇಕು ಹಾಗೂ ಅದರ ವರ್ಚಸ್ಸನ್ನು ಕೂಗಿಸಬೇಕು ಎಂದು ಸರ್ಕಾರಿ ಅಧೀನದ ಇ.ಡಿ. ಮೂಲಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ಖಂಡನೀಯ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.

ಪ್ರಜಾಪ್ರಭುತ್ವ ಎಂಬುದು ದೇಶದಲ್ಲಿ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಸರಿಪಡಿಸದಿದ್ದರೆ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ದ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು .

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಬುದ್ಧ ಮತದಾರರು ಶಿಕ್ಷಕರು ಸರ್ಕಾರಿ ನೌಕರರು ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಹಿರಿಯ ಮುತ್ಸದ್ದಿ ಮಾದೇಗೌಡರ ಮೇಲೆ ಅಭಿಮಾನ ಅಭಿಮಾನದಿಂದ ಕಾಂಗ್ರೆಸ್ ಪಕ್ಷವನ್ನು ದಾಖಲೆಯ ಮತಗಳಿಂದ ಗೆಲ್ಲಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು ವರ್ಷದ ಮುಂಚೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನಾಗಿ ಮಧು ಮಾದೇಗೌಡ ಅವರನ್ನು ಘೋಷಿಸಿತು ಎಂದರು

ಜೆಡಿಎಸ್ ವರಿಷ್ಠರ ವರ್ತನೆಯಿಂದ ಬೇಸರಗೊಂಡ ಮರಿತಿಬ್ಬೇಗೌಡ ಹಾಗೂ ಟಿಕೆಟ್ ವಂಚಿತ ನಾಯಕ ಕೀಲಾರ ಜಯರಾಂ ಅವರ ಬೆಂಬಲದಿಂದ ಕಾಂಗ್ರೆಸ್ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 36 ವರ್ಷಗಳ ನಂತರ ದಾಖಲೆಯ ಮತಗಳಿಂದ ಜಯ ಗಳಿಸುವ ಮೂಲಕ ಜನರಲ್ಲಿ ವಿಶ್ವಾಸ ಹುಟ್ಟಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದವರು ಪಕ್ಷದ ಎಲ್ಲಾ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎಂದು ಹರ್ಷಿಸಿದ ಅವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಟೀಕಿಸಿದ ಚಲುವರಾಯ ಸ್ವಾಮಿ ಕುಮಾರ ಸ್ವಾಮಿ ಅವರು ಬಿಜೆಪಿಯನ್ನು ತೆಗಳುವ ನಾಟಕವಾಡಿ ಒಳಗೆ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ ಎಂದು ಜೆಡಿಎಸ್ ಜೆಡಿಎಸ್ ಅವರನ್ನು ಲೇವಡಿ ಮಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಮತದಾನವಾಗಿದೆ. ಮಾಜಿ ಉಪಸಭಾಪತಿ ಮರಿ ತಿಬ್ಬೇಗೌಡ ಅವರ ಬೆಂಬಲವೇ ಮಧು ಮಾದೇಗೌಡರ ಗೆಲುವಿಗೆ ಬಹುತೇಕ ಕಾರಣವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ಎಂ ಎಲ್ ಸಿ ಮಧು ಜಿ ಮಾದೇಗೌಡರು ಮಾತನಾಡಿ ಕಳೆದ 35 ವರ್ಷಗಳ ನಂತರ ಕಾಂಗ್ರೆಸ್ ಗೆ ವಿಧಾನಪರಿಷತ್ ಚುನಾವಣೆಯಲ್ಲಿ ದಾಖಲೆಯ ಹಾಗೂ ಅಭೂತಪೂರ್ವ ಬೆಂಬಲ ಸಿಕ್ಕಿದೆ ಮೇಲೆ ವಿಶ್ವಾಸವಿರಿಸಿ ನನ್ನನ್ನು ಆಯ್ಕೆ ಮಾಡಿದ್ದಾರೆ ಮತದಾರರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ ತಮ್ಮ ಗೆಲುವಿಗೆ ಕಾರಣರಾದ ಮಾಜಿ ಸಚಿವ ಆತ್ಮನಂದ ಚೆಲುವರಾಯಸ್ವಾಮಿ ನರೇಂದ್ರಸ್ವಾಮಿ ರಮೇಶ್ ಬಂಡಿಸಿದ್ದೇಗೌಡ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ ಗಂಗಾಧರ್ ಎಂಎಲ್ಸಿ ದಿನೇಶ್ ಗೌಡ ಎಲ್ಲಾ ನಾಯಕರಿಗೂ ಹಾಗೂ ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದರು.

ಇದನ್ನು ಓದಿ – ತೆಲಂಗಾಣ, ಬಿಹಾರದಲ್ಲಿ ಪರಿಸ್ಥಿತಿ ಉದ್ವಿಗ್ನ- ಗುಂಡಿನ ದಾಳಿಗೆ ಓರ್ವ ಬಲಿ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ನರೇಂದ್ರ ಸ್ವಾಮಿ , ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೆಚ್.ಕೆ.ರುದ್ರಪ್ಪ ಮುಂತಾದವರು ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!