ತೆಲಂಗಾಣ, ಬಿಹಾರದಲ್ಲಿ ಪರಿಸ್ಥಿತಿ ಉದ್ವಿಗ್ನ- ಗುಂಡಿನ ದಾಳಿಗೆ ಓರ್ವ ಬಲಿ

Team Newsnap
1 Min Read

ಹೊಸ ಸೇನಾ ನೇಮಕಾತಿ ನೀತಿಯ ವಿರೋಧಿಸಿ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ತೀವ್ರಗೊಂಡಿದೆ ತೆಲಂಗಾಣದಲ್ಲಿ ಓರ್ವ ಬಲಿಯಾಗಿದ್ದಾನೆ . 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜರುಗಿದೆ.

ಬಿಹಾರ, ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ ಅಗ್ನಿಪಥ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯು ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಅಷ್ಟೇ ಅಲ್ಲದೇ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲೂ ಪ್ರತಿಭಟನೆಗಳು ಹೆಚ್ಚುತ್ತಿದೆ. ಇದನ್ನು ಓದಿ –ನಾಳೆ ಬೆಳಿಗ್ಗೆ 11 ಗಂಟೆಗೆ PUC ಫಲಿತಾಂಶ ಪ್ರಕಟ – ಸಚಿವ ನಾಗೇಶ್
350ಕ್ಕೂ ಹೆಚ್ಚು ಜನರ ಗುಂಪೊಂದು ತೆಲಂಗಾಣ ಪೊಲೀಸರು ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಬಂದು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆ ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಓರ್ವನಿಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಹಲವರಿಗೆ ಗಾಯಗಳಾಗಿವೆ.

ಅಷ್ಟೇ ಅಲ್ಲದೇ ಬಿಹಾರದಲ್ಲೂ ಹಿಂಸಾತ್ಮ ಪ್ರತಿಭಟನೆ 3ನೇ ದಿನಕ್ಕೆ ಕಾಲ ಇಟ್ಟಿದ್ದು, ಉಗ್ರ ರೂಪ ತಾಳಿದೆ. ಪ್ರತಿಭಟನಾಕಾರರು ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್‍, ರಾಜ್‍ಕೋಟ್ ಎಕ್ಸ್‌ಪ್ರೆಸ್‍ ಮತ್ತು ಅಜಂತಾ ಎಕ್ಸ್‌ಪ್ರೆಸ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಉಪಮುಖ್ಯಮಂತ್ರಿ ಮನೆ ಮೇಲೆ ದಾಳಿ ನಡೆದಿದೆ.

Share This Article
Leave a comment