ಕೇಂದ್ರ ಸರ್ಕಾರದ ಇಂದಿನ ಬಜೆಟ್ ದೇಶ ವಿನಾಶ ಮಾಡುವ ಬಜೆಟ್ , ಇದು ಸಬ್ಕಾ ನಾಶ್ ಬಜೆಟ್ . ಜನರ ನಂಬಿಕೆಗೆ ದ್ರೋಹ ಮಾಡುವ ಬಜೆಟ್, ಮೋದಿ ಅವರ ಮುಂದೆ ರಾಜ್ಯ ಸರ್ಕಾರ ಹೇಡಿ ಥರ ಕೂರುತ್ತದೆ. ಕರ್ನಾಟಕಕ್ಕೆ ಯಾವುದೇ ಲಾಭವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮೈಸೂರಿನ ಎಚ್.ಡಿ. ಕೋಟೆಯ ಕಬಿನಿ ಹಿನ್ನಿರಿನ ರೆಸಾರ್ಟ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಬಗ್ಗೆ ನಾನು ತುಂಬಾ ನಿರೀಕ್ಷೆ ಇಟ್ಟು ಕೊಂಡಿರಲಿಲ್ಲ. ಜನ ಸಾಮಾನ್ಯರು ತುಂಬ ನಿರೀಕ್ಷೆ ಇಟ್ಟು ಕೊಂಡಿದ್ದರು, ಅವರ ನಿರೀಕ್ಷೆ ಈಡೇರಿಲ್ಲ ಎಂದಿದ್ದಾರೆ.
34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಕಳೆದ ವರ್ಷ ಮಂಡಿಸಿದ್ದರು. ಈ ವರ್ಷ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. 4ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.
11 ಲಕ್ಷದ 87ಸಾವಿರ 180 ಕೋಟಿ ಸಾಲ ಮಾಡುತ್ತಿದ್ದಾರೆ. ಕಳೆದ ವರ್ಷ 135 ಲಕ್ಷ 87 ಸಾವಿರ ಕೋಟಿ ರೂಪಾಯಿ ಸಾಲ ಇತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಈಗ ಮಾಡುವ ಸಾಲ ಸೇರಿದರೆ 8 ವರ್ಷದಲ್ಲಿ 93ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ಬಜೆಟ್ ಕುರಿತಾಗಿ ವ್ಯಂಗ್ಯವಾಡಿದ್ದಾರೆ.
ರಸಗೊಬ್ಬರದ ಸಬ್ಸಿಡಿಯನ್ನೇ ಕಡಮೆ ಮಾಡಿದ್ದಾರೆ. ಗೊಬ್ಬರದ ಬೆಲೆ ಜಾಸ್ತಿ ಆಗುವ ಮುನ್ಸೂಚನೆ ಬಜೆಟ್‍ನಲ್ಲಿ ಕಾಣುತ್ತಿದೆ. ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಮಾಡುತ್ತೇವೆ ಅಂತಾ ಹೇಳಿದ್ದರು, ಈಗ ಮತ್ತೆ ಅದನ್ನೇ ಹೇಳುತ್ತಿದ್ದಾರೆ.
ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಕರ್ನಾಟಕದ ನೀರಾವರಿ ಯೋಜನೆಗಳು ಹಾಗೇ ನೆನೆಗುದಿಗೆ ಬಿದ್ದಿವೆ. ಬಜೆಟ್ ಅಂದರೆ ದೇಶದ ಆದ್ಯತೆಗಳೇನೂ ಎಂಬುದು ಸ್ಪಷ್ಟವಾಗಿರಬೇಕು. ಆದರೆ ಆದ್ಯತೆಯೆ ಕಾಣುತ್ತಿಲ್ಲ ಎಂದಿದ್ದಾರೆ.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್