2022-23?ಸಾಲಿನ ಬಜೆಟ್‌ನ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದ್ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ತೆರಿಗೆದಾರರು ಈಗ ಎರಡು ವರ್ಷಗಳಲ್ಲಿ ಐಟಿ ರಿಟರ್ನ್ಸ್ ಅನ್ನು ನವೀಕರಿಸಬಹುದಾಗಿದೆ ಎಂದು ಘೋಷಿಸಿದ್ದಾರೆ.
ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಆಗಿರುವ ಲೋಪ ಸರಿಪಡಿಸಿ, ನವೀಕೃತ ರಿಟರ್ನ್ಸ್ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ.
ವರ್ಜುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ದರಗಳು :
2.5 ಲಕ್ಷ ರೂ.ವರೆಗೆ – ಶೂನ್ಯ
2.5-5 ಲಕ್ಷ – ಶೇ.5
5-7.50 ಲಕ್ಷ – ಶೇ.10 (ಒಟ್ಟು ಆದಾಯ 5 ಲಕ್ಷ ಮೇಲ್ಪಟ್ಟು ಇದ್ದರೆ 12,500 ರೂ. ಹೆಚ್ಚುವರಿ ತೆರಿಗೆ)
7.50-10 ಲಕ್ಷ – ಶೇ.15 (ಒಟ್ಟು ಆದಾಯ 7.5 ಲಕ್ಷ ಮೇಲ್ಪಟ್ಟು ಇದ್ದರೆ 37,500 ರೂ. ಹೆಚ್ಚುವರಿ ತೆರಿಗೆ)
10-12.50 ಲಕ್ಷ – ಶೇ.20 (ಒಟ್ಟು ಆದಾಯ 10 ಲಕ್ಷ ಮೇಲ್ಪಟ್ಟು ಇದ್ದರೆ 75,000 ರೂ. ಹೆಚ್ಚುವರಿ ತೆರಿಗೆ)
12.50-15 ಲಕ್ಷ – ಶೇ.25 (ಒಟ್ಟು ಆದಾಯ 12.5 ಲಕ್ಷ ಮೇಲ್ಪಟ್ಟು ಇದ್ದರೆ 1,25,000 ರೂ. ಹೆಚ್ಚುವರಿ ತೆರಿಗೆ)
15 ಲಕ್ಷ ಮೇಲ್ಪಟ್ಟು – ಶೇ.30 (ಒಟ್ಟು ಆದಾಯ 15 ಲಕ್ಷ ಮೇಲ್ಪಟ್ಟು ಇದ್ದರೆ 1,87,500 ರೂ. ಹೆಚ್ಚುವರಿ ತೆರಿಗೆ)
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಬಹುಪತ್ನಿತ್ವ ಸ್ವೀಕರಿಸಲು ನಾನು ಸಿದ್ಧ: ಪೋಸ್ಟರ್ ಹಿಡಿದು ಬೀದಿ ಬೀದಿ ಅಲೆಯುತ್ತಿರುವ ಯುವತಿ!
ಕಾಶ್ಮೀರ ತೊರೆಯಿರಿ – ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಬೆದರಿಕೆ