ಜ್ಯೋತಿಷಿಯ ಮನೆಗೆ ಜ್ಯೋತಿಷ್ಯ ಹೇಳುವ ನೆಪದಲ್ಲಿ ಹಾಡಹಗಲೇ ಮೂರು ಖದೀಮರು ಕನ್ನ ಹಾಕಿ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ಜರುಗಿದೆ
ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪ ಬಾಡಿಗೆ ಮನೆ ಮಾಡಿಕೊಂಡು ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿ ಪ್ರಮೋದ್ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳ ತಂಡ ಇವರ ಗ್ರಹ ಗತಿ ಬದಲಿಸಿದ್ದಾರೆ . ಅವರ ಕೈ ಕಾಲು ಕಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.
ನಿನ್ನೆ ಬೆಳಗ್ಗೆ 9;30 ರ ಸಮಯದಲ್ಲಿ ಮೂವರು ಒಳಗೆ ಬಂದು ತಕ್ಷಣ ಮನೆ ಬಾಗಿಲನ್ನು ಲಾಕ್ ಮಾಡಿ ತಕ್ಷಣವೇ ಜ್ಯೋತಿಷಿ ಪ್ರಮೋದ್ ಕೈಕಟ್ಟಿ ಹಲ್ಲೆ ಮಾಡಿ, ಮನೆಯಲ್ಲಿದ್ದ 5 ಲಕ್ಷ ನಗದು, 400 ಗ್ರಾಂ. ಚಿನ್ನಾಭರಣ, 350 ಗ್ರಾಂ ಬೆಳ್ಳಿ ದೋಚಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮನೆಯಿಂದ ಎಸ್ಕೇಪ್ ಅಗಿದ್ದರೂ9.30ಕ್ಕೆ ಬಂದವರು ಅಷ್ಟೊತ್ತು ಮನೆಯಲ್ಲಿ ಏನು ಮಾಡುತ್ತಿದ್ದರು ಎಂಬುದರ ಕಥೆ ರೋಚವಾಗಿದೆ. ಇದನ್ನು ಓದಿ – ಬೆಂಗಳೂರಿನಲ್ಲಿ ಮೊದಲ ತೇಲುವ ಸೋಲಾರ್ ಪಾರ್ಕ್
ದರೋಡೆಕೋರರು ಮೊದಲೇ ಫ್ಲಾನ್ ಮಾಡಿಕೊಂಡು ಬಂದಿದ್ದರು ತಮ್ಮ ದರೋಡೆಯ ಕೃತ್ಯದ ಸಾಕ್ಷಿ ಸಿಗಬಾರದು ಅಂತ ಸಿಸಿಟಿವಿ ಡಿವಿಆರ್ ಅನ್ನ ಕೂಡ ಕದ್ದೋಯ್ದಿದ್ದಾರೆ. ಯಾವುದೇ ಸಾಕ್ಷಿ ಸಿಗದಂತೆ ಕೈ ಚಳಕ ತೋರಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಸದಾ ಜನಜಂಗುಳಿಯಿಂದ ಕೂಡಿದ್ದ ಮನೆಗೆ ಯಾರೂ ಬರದಂತೆ ತಡೆಯಲು ಒಬ್ಬ ಮಹಿಳೆಯು ಜ್ಯೋತಿಷಿಯನ್ನು ಭೇಟಿ ಮಾಡಲು ಬಂದವರಿಗೆಲ್ಲ ಏನೇನೋ ಹೇಳಿ ವಾಪಸ್ಸು ಕಳಿಸಿದ್ದಳು
ಪೊಲೀಸರು ಬರುವವರೆಗೂ ಈ ಮಹಿಳೆ ಜ್ಯೋತಿಷಿಯ ಮನೆಯಲ್ಲೇ ಇದ್ದಳು ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಮಹಿಳೆಗೆ ದರೊಡೆಕೋರರು ಹಲ್ಲೆ ಮಾಡಿಲ್ಲ. ಅಕೆಯ ಮೈ ಮೇಲೆ ಸಣ್ಣ ಗಾಯ ಕೂಡ ಅಗಿಲ್ಲ. ಆದರೆ ಈ ಮಹಿಳೆ ಯಾಕೆ ಜ್ಯೋತಿಷಿ ಬ್ಯುಸಿ ಇದ್ದಾರೆ ಅಂತಾ ಹೇಳಿ ಕಳಿಸಿದ್ಲು. ಆ ಮೂವರು ಎಸ್ಕೇಪ್ ಅದ್ರೂ ಈಕೆ ಯಾಕೆ ಕಾಲ್ಕಿತ್ತಿರಲಿಲ್ಲ. ಈ ಪ್ರಶ್ನೆಗೆ ಉತ್ತರ ಪಡೆಯೋದಕ್ಕೆ ಕೆಂಗೇರಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 49 ರನ್ ಜಯ – ಸರಣಿ ವಶ
ಒಟ್ಟಾರೆ, ಪೊಲೀಸರು ಅಕ್ಕಪಕ್ಕದ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಜ್ಯೋತಿಷಿ ನೀಡಿರುವ ಮಾಹಿತಿ ಮೇರೆಗೆ ಮೂವರಿಗಾಗಿ ಬಲೆ ಬೀಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ