ಯುವಕ – ಯುವತಿ ಬಳಿ ಹಣ ದೋಚಲು ಹೋದೆವು. ಆದರೆ ಅವರ ಬಳಿ ಹಣ ಇರಲಿಲ್ಲ. ಆದ್ದರಿಂದ ಹಲ್ಲೆ ನಡೆಸಿ, ನಂತರ ಅತ್ಯಾಚಾರ ಮಾಡಿ ಪರಾರಿಯಾಗಿದ್ದೆವು.
7ನೇ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 10 ದಿನ ತಮ್ಮ ವಶಕ್ಕೆ ಪಡೆದಿದ್ದಾರೆ.
ಏಳನೇ ಆರೋಪಿಯಿಂದಲೇ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಎರಡು ದಿನದ ಹಿಂದೆ ತಮಿಳುನಾಡಿನ ತಿರುಪ್ಪೂರುನಲ್ಲಿ ಇವನನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದಲ್ಲಿ ಬಂಧಿತನಾಗಿರುವ ಅಪ್ರಾಪ್ತನ ಜೊತೆ ಈ ಆರೋಪಿ ಕೂಲಿ ಕೆಲಸ ಮಾಡಿಕೊಂಡಿದ್ದ. ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಂಜೆ ಎಣ್ಣೆ ಪಾರ್ಟಿ ಮಾಡುತ್ತಿದ್ದೆವು. ನಂತರ ನಿರ್ಜನ ಪ್ರದೇಶದಲ್ಲಿದ್ದವರನ್ನು ದೋಚುತ್ತಿದ್ದೆವು.
ಆ ದಿನವೂ ನಾವು ಈ ಯುವಕ ಯುವತಿ ಬಳಿ ಏನಾದರೂ ಇದ್ದರೆ ದೋಚುವ ಪ್ಲಾನ್ ಮಾಡಿದೆವು. ಅವರ ಬಳಿ ಏನೂ ಇರಲಿಲ್ಲ. ಕೊನೆಗೆ ಇಬ್ಬರ ಮೇಲೂ ಹಲ್ಲೆ ಮಾಡಿ , ಯುವತಿ ಮೇಲೆ ಅತ್ಯಾಚಾರ ಮಾಡಿದೆವು ಎಂದು ಹೇಳಿದ್ದಾನೆ ಎಂದು ಪೋಲಿಸ್ ಮೂಲಗಳು ಹೇಳಿವೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು