ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಇಲ್ಲ- ಬರಿಗೈಲಿ ವಾಪಸ್ ಬಂದ ಸಿಎಂ ಯಡಿಯೂರಪ್ಪ

Team Newsnap
1 Min Read

ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆಗೆ ಪಟ್ಟಿ ಸಿದ್ದಪಡಿಸಿಕೊಂಡು ಅತ್ಯಂತ ಆತ್ಮವಿಶ್ವಾಸದಿಂದ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಬರಿಗೈಲಿ ವಾಪಸ್ ಬಂದಿದ್ದಾರೆ.

ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಲ್ಲಿ ಅವಕಾಶ ಪಡೆಯುವ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ಲರು.

ಈ ಪಟ್ಟಿಯನ್ನು ಪಡೆದುಕೊಂಡ ನಡ್ಡಾ ಇನ್ನೂ ಮೂರು – ನಾಲ್ಕು ದಿನ ಪಟ್ಟಿ ಪರಿಶೀಲನೆಗೆ ಸಮಯಾವಕಾಶ ಕೇಳಿದರು.

ನಡ್ಡಾ ಈ ನಿರ್ಧಾರದಿಂದ ನಿರಾಶೆಗೊಂಡ ಯಡಿಯೂರಪ್ಪ ನಿರಾಶೆಯಿಂದ ಬೆಂಗಳೂರಿಗೆ ಬರಿಗೈಲಿ ವಾಪಸ್ಸಾದರು.

ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದ ಹುಮ್ಮಸ್ಸಿನಲ್ಲೇ ತಾವು ಸಿದ್ದಪಡಿಸಿ ಕೊಂಡ ಹೋಗಿದ್ದ ಪಟ್ಟಿಗೆ ಅನುಮತಿ ಸಿಗದೇ ಹೋಗದಿರುವುದು ತುಂಬಾ ನಿರಾಶೆ ತಂದಿದೆ.

ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣಾ ಘೋಷಣೆಯಾದರೆ ಸಚಿವಾಕಾಂಕ್ಷಿಗಳು ಬಂಡೇಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಹಾಕಿದ್ದ ಲೆಕ್ಕಾಚಾರ ಎಲ್ಲವೂ ಉಲ್ಟಾ ಆಗಿದೆ.
ಈ ನಡುವೆ ಸಚಿವ ಆಕಾಂಕ್ಷಿಗಳ ಶಾಸಕರ ತಂಡ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.

Share This Article
Leave a comment