December 23, 2024

Newsnap Kannada

The World at your finger tips!

deepa1

ಹೋರಾಟಗಾರನ ಹುದ್ದೆಯೊಂದು ಖಾಲಿ ಇದೆ !

Spread the love

ಅರ್ಹತೆಗಳು……

1) ಯಾವುದೇ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ.
2) ವಯಸ್ಸಿನ ಮಿತಿ ಇಲ್ಲ.

3) ದಿನದ 24 ಗಂಟೆಯೂ ಕೆಲಸ ಮಾಡಬೇಕು.

4) ಎಡ ಬಲ ಪಂಥ ಸೇರಿ ಯಾವುದೇ ಇಸಂಗೆ ಒಳಗಾಗಿರಬಾರದು.

5) ಸ್ವಾರ್ಥ ರಹಿತ, ನಿಷ್ಪಕ್ಷಪಾತ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿರಬೇಕು.

6) ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವವರಾಗಿರಬೇಕು.

7) ಆಡಳಿತಾತ್ಮಕ ದಕ್ಷತೆ ಹೊಂದಿರಬೇಕು.

8) ತನ್ನ ಜನ ಮತ್ತು ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದರಿರಬೇಕು.

9) ಜಾತಿ ಮತ ಧರ್ಮ ಭಾಷೆಯ ಸಂಕುಚಿತತೆ ಮೀರಿ ವಿಶ್ವಮಾನವ ಪ್ರಜ್ಞೆ ಹೊಂದಿರಬೇಕು.

10) ತನ್ನೆಲ್ಲಾ ಆಸ್ತಿಯನ್ನು ಹಣವನ್ನು ( ಇದ್ದರೆ ) ಸರ್ಕಾರಕ್ಕೆ ಒಪ್ಪಿಸಬೇಕು.
ಆತ ಬದುಕಿರುವವರೆಗೂ ಸರ್ಕಾರವೇ ಆತನ ಮತ್ತು ಆತನ ಅವಲಂಬಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತದೆ.

11) ಆತ ಯಾವುದೇ ಬ್ಯಾಂಕ್ ಅಕೌಂಟ್, ದೂರವಾಣಿ ಹೊಂದಿರಬಾರದು ಮತ್ತು ಯಾವುದೇ ಖಾಸಗಿ ಮಾಹಿತಿಯನ್ನು ಬಚ್ಚಿಟ್ಟಿರಬಾರದು.

12) ಆತನನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಆತನ ಮುಂದಿನ ಜೀವನದ ಎಲ್ಲವೂ ಸಂಪೂರ್ಣ ಪಾರದರ್ಶಕ ನಿಯಮದಡಿ ಬರಲು ಕಡ್ಡಾಯವಾಗಿ ಒಪ್ಪಿಗೆ ನೀಡಬೇಕು.

13) ಸಾಂಸಾರಿಕ ಬಂಧನಗಳಿಂದ ಮುಕ್ತವಾಗಿರುವವರಿಗೆ ಆಧ್ಯತೆ.

14) ಜನರ ತೀರ್ಮಾನವೇ ಅಂತಿಮ.
ಅದನ್ನು ಯಾರೂ ಪ್ರಶ್ನಿಸುವಂತಿಲ್ಲ……

ಮುಖವಾಡವಿಲ್ಲದ – ಜನರನ್ನು ಪ್ರೀತಿಸುವ ,- ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವ,
ಜನನಾಯಕನ ನಿರೀಕ್ಷೆಯಲ್ಲಿ..

  • ವಿವೇಕಾನಂದ. ಹೆಚ್.ಕೆ
Copyright © All rights reserved Newsnap | Newsever by AF themes.
error: Content is protected !!