ದೇಶದ ವಿಜ್ಞಾನಿಗಳ ಶಕ್ತಿ-ಸಾಮರ್ಥ್ಯಕ್ಕೆ ವಿಶ್ವವೇ ಶರಣು – ಪ್ರಧಾನಿ ಮೋದಿ

Team Newsnap
1 Min Read

ಬೆಂಗಳೂರು :
ನಮ್ಮ ರಾಷ್ಟ್ರದ ವಿಜ್ಞಾನಿಗಳ ಸಾಧನೆಯನ್ನು ವಿಶ್ವವೇ ಮೆಚ್ಚಿಕೊಂಡಿದೆ. ಭಾರತದ ವಿಜ್ಞಾನಿಗಳ ಶಕ್ತಿ- ಸಾಮರ್ಥ್ಯವನ್ನು ಕಂಡು ವಿಶ್ವವೇ ಬೆರಗಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮನ ತುಂಬಿ ಹೇಳಿದರು.

ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ತಮ್ಮನ್ನು ಬರಮಾಡಿಕೊಳ್ಳಲು ಹೆಚ್ ಎ ಎಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ನೆರೆದಿದ್ದ ಸಾವಿರಾರು ಜನರು, ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಕಂಡು ಪುಳಕಿತರಾಗಿ ಅವರನ್ನು ಉದ್ದೇಶಿಸಿ ಮಾತನಾಡಿದರು.

ಚಂದ್ರಯಾನ-3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬಂದಿರುವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದ್ದನ್ನು ಜೋಹಾನ್ಸ್ ಬರ್ಗ್ ನಿಂದಲೇ ನೋಡಿದೆ. ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಲು ಅಂದೇ ತೀರ್ಮಾನಿಸಿದೆ.

ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬಂದಿರುವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದ್ದನ್ನು ಜೋಹಾನ್ಸ್ ಬರ್ಗ್ ನಿಂದಲೇ ನೋಡಿದೆ. ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಲು ಅಂದೇ ತೀರ್ಮಾನಿಸಿದೆ

ಶಿಷ್ಟಾಚಾರ ಪಾಲನೆ ಬೇಡವೆಂದು ನಾನೇ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ತಿಳಿಸಿದ್ದೆ ಎಂದ ಮೋದಿ ಜೈಕಿಸಾನ್, ಜೈಜವಾನ್, ಜೈಜವಾನ್ ಎಂಬ ಘೋಷಣೆ ಮೊಳಗಿಸಿ, ನೆರೆದವರು ಹರ್ಷೋದ್ಗಾರ ಹೆಚ್ಚಿಸಿದರು. ನಂತರ ರಸ್ತೆ ಮಾರ್ಗವಾಗಿ ಇಸ್ರೋ ಕಮಾಂಡ್ ಕಚೇರಿಯತ್ತ ಪ್ರಯಾಣ ಬೆಳೆಸಿದರು.

ಮಾರ್ಗ ಮಧ್ಯೆ ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದ ಜನರು ಆನಂದ ಉತ್ಸಾಹದೊಂದಿಗೆ ಸ್ವಾಗತಿಸಿದರು.

ಅದ್ದೂರಿ ಸ್ವಾಗತ

ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿಗಳು ಗ್ರೀಸ್ ದೇಶದ ಪ್ರವಾಸ ಮುಗಿಸಿ ಸತತ 10 ಗಂಟೆಗಳ ಕಾಲ ಪ್ರಯಾಣಿಸಿ ನೇರವಾಗಿ ಬೆಂಗಳೂರು ನಗರದ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿ ಹಿರಿಯ ಅಧಿಕಾರಿಗಳು ಪ್ರಧಾನಿಗಳನ್ನು ಬರಮಾಡಿಕೊಂಡರು.

Share This Article
Leave a comment