February 19, 2026

Newsnap Kannada

The World at your finger tips!

car nale

ಕಾರ್ ಸಮೇತ ಭದ್ರಾ ನಾಲೆಗೆ ಹಾರಿದ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನ – ಇಬ್ಬರು ಪಾರು

Spread the love

ವಾಯ್ಸ್ ಮೆಸೇಜ್ ಮಾಡಿ ಇಡೀ ಕುಟುಂಬ ಕಾರು ಸಮೇತ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಬಳಿಯ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.

ಕುಟುಂಬದ ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ಇದೆ.

13 ವರ್ಷ ಧ್ಯಾನ್, 35 ವರ್ಷದ ನೀತು ಸಾವಿನಿಂದ ಪಾರಾಗಿದ್ದಾರೆ. ನೀತು ಪತಿ ಮಂಜು, ಅತ್ತೆ ಸುನಂದಮ್ಮ ಸಾವಿನ ಶಂಕೆ ವ್ಯಕ್ತವಾಗಿದೆ, ನೀರಲ್ಲಿ ಮುಳುಗಿರುವ ಇಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.

ಆತ್ಮಹತ್ಯೆಗೆ ಯತ್ನಿಸಿದವರು ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆಯವರು ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

error: Content is protected !!