ಚಂದ್ರನ ಮೇಲ್ಮೈನ ಮೊದಲ ಫೋಟೋ ಕಳುಹಿಸಿದ ವಿಕ್ರಂ ಲ್ಯಾಂಡರ್

Team Newsnap
1 Min Read

ಬೆಂಗಳೂರು: ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಐತಿಹಾಸಿಕ ದಾಖಲೆ ಮಾಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಲ್ಯಾಂಡರ್ ತಾನು ತೆಗೆದ ನಾಲ್ಕು ಫೋಟೋಗಳನ್ನು ಇಸ್ರೋ ಗೆ ರವಾನಿಸಿದೆ.

ಇಸ್ರೋ ಅಧಿಕೃತವಾಗಿ ಫೋಟೋಗಳನ್ನು ಬಿಡುಗಡೆ ಮಾಡಿದೆ.

ವಿಕ್ರಂ ಲ್ಯಾಂಡರ್ ಹಾರಿಜಂಟಲ್ ವೆಲಾಸಿಟಿ ಕ್ಯಾಮೆರಾದಿಂದ ತೆಗೆದ ನಾಲ್ಕು ಫೋಟೋಗಳನ್ನು ರವಾನಿಸಿದೆ ಈಗ ಎಲ್ಲಾ ಪ್ರಕ್ರಿಯೆಗಳೂ ಸುಸೂತ್ರವಾಗಿ ಸಾಗಿವೆ ಎಂದು ಹೇಳಿದೆ

ವಿಕ್ರಂ ಲ್ಯಾಂಡರ್ ರವಾನಿಸಿದ ನಾಲ್ಕು ಫೋಟೋಗಳನ್ನು ಬೆಂಗಳೂರಿನಲ್ಲಿರುವ ಇಸ್ರೋದ ಕಂಟ್ರೋಲ್ ಸೆಂಟರ್’ನಲ್ಲಿ ರಿಸೀವ್ ಮಾಡಿಕೊಂಡು ಪ್ರಕಟಿಸಲಾಗಿದೆ.ಭಾರತ ಚಂದ್ರನ ಮೇಲಿದೆ : ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ಮೋದಿ ಸಂತಸ

CH-3 ಲ್ಯಾಂಡರ್ ಮತ್ತು ಬೆಂಗಳೂರಿನ MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ.

Share This Article
Leave a comment