ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದ ಕಾರಣದಿಂದ ಮೂವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆಯಲ್ಲಿ ಬುಧವಾರ ನಡೆದಿದೆ. ಚಿಕ್ಕವಲಗಮಾದಿ ನವೀನ್ (32 ) ನೇರಳೆಕೆರೆ ರಾಜೇಂದ್ರ (32) ಮೋಹನ್ (28 ) ಮೃತ ದುರ್ದೈವಿಗಳು.
ಇದೇ ವೇಳೆ ಊಟ ತರಲು ಹೋಗಿದ್ದ ಮತ್ತೊಬ್ಬ ಸ್ನೇಹಿತ ಶಿವರಾಜ್ ಅವಘಡದಿಂದ ಬಚಾವ್ ಆಗಿದ್ದಾರೆ.
ಇಂದು ಮುಂಜಾನೆ ರೈಲು ತಡವಾದ ಹಿನ್ನೆಲೆ ವಾಪಸ್ ಆಗಿದ್ದ ಸ್ನೇಹಿತರು, ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋದ ವೇಳೆ ದುರಂತ ಸಂಭವಿಸಿದೆ.
ತೆಪ್ಪ ಮುಗುಚಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದರೂ, ಆದರೆ ಕೆರೆ ಮಧ್ಯದಲ್ಲಿ ಸಿಲುಕಿದ ಹಿನ್ನೆಲೆ ರಕ್ಷಣೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮೂವರು ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆಸಿದ್ದು, ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಿ.ಕೆ.ಧರಣಿ ದೇವಿ ಭೇಟಿ ಪರಿಶೀಲನೆ ನಡೆಸಿದರು.
ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು
- IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ
- ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ
- ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
- ತಮ್ಮ ಹೆಸರು ರಾಜ್ಯಸಭೆಗೆ ಪ್ರಸ್ತಾಪಿಸದ ಹಿನ್ನಲೆ : ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮುಖ್ಯಮಂತ್ರಿ ಚಂದ್ರು
More Stories
ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
ತಮ್ಮ ಹೆಸರು ರಾಜ್ಯಸಭೆಗೆ ಪ್ರಸ್ತಾಪಿಸದ ಹಿನ್ನಲೆ : ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮುಖ್ಯಮಂತ್ರಿ ಚಂದ್ರು