December 28, 2024

Newsnap Kannada

The World at your finger tips!

kolar 3

ಕೋಲಾರದಲ್ಲಿ ತೆಪ್ಪ ಮುಗುಚಿ ಮೂವರು ದುರಂತ ಸಾವು

Spread the love

ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದ ಕಾರಣದಿಂದ ಮೂವರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆಯಲ್ಲಿ ಬುಧವಾರ ನಡೆದಿದೆ. ಚಿಕ್ಕವಲಗಮಾದಿ ನವೀನ್ (32 ) ನೇರಳೆಕೆರೆ ರಾಜೇಂದ್ರ (32) ಮೋಹನ್ (28 ) ಮೃತ ದುರ್ದೈವಿಗಳು.

ಇದೇ ವೇಳೆ ಊಟ ತರಲು ಹೋಗಿದ್ದ ಮತ್ತೊಬ್ಬ ಸ್ನೇಹಿತ ಶಿವರಾಜ್ ಅವಘಡದಿಂದ ಬಚಾವ್ ಆಗಿದ್ದಾರೆ.

ಇಂದು ಮುಂಜಾನೆ ರೈಲು ತಡವಾದ ಹಿನ್ನೆಲೆ ವಾಪಸ್ ಆಗಿದ್ದ ಸ್ನೇಹಿತರು, ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋದ ವೇಳೆ ದುರಂತ ಸಂಭವಿಸಿದೆ.

ತೆಪ್ಪ ಮುಗುಚಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದರೂ, ಆದರೆ ಕೆರೆ ಮಧ್ಯದಲ್ಲಿ ಸಿಲುಕಿದ ಹಿನ್ನೆಲೆ ರಕ್ಷಣೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮೂವರು ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆಸಿದ್ದು, ಸ್ಥಳಕ್ಕೆ ಕೆಜಿಎಫ್ ಎಸ್​​ಪಿ ಡಿ.ಕೆ.ಧರಣಿ ದೇವಿ ಭೇಟಿ ಪರಿಶೀಲನೆ ನಡೆಸಿದರು.

ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!