ಬೆಂ- ಮೈ ಹೆದ್ದಾರಿಯ ಟೋಲ್ ದರ ಭಾರೀ ಹೆಚ್ಚಳ

Team Newsnap
2 Min Read

ಬೆಂಗಳೂರು : ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈ ವೇ ಟೋಲ್ ದರದಲ್ಲಿ ಮತ್ತೆ ಭಾರೀ ಹೆಚ್ಚಳ ಮಾಡಲಾಗಿದೆ.

ಈಗಾಗಲೇ ಹೊಸ ದರವನ್ನು ಜೂನ್ 1 ರಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದೇಶ ಹೊರಡಿಸಿದೆ.

ಟೋಲ್ ದರವನ್ನು ಶೇ.22ರಷ್ಟು ಹೆಚ್ಚಳ ಮಾಡಿ, ವಾಹನ ಸವಾರರ ಜೇಬಿಗೆ ಕತ್ತರಿಯನ್ನು ಸದ್ದಿಲ್ಲದೇ ಹಾಕಲಾಗಿದೆ.

ಫಾಸ್ಟ್ ಟ್ಯಾಗ್ ನಿಂದ ವಾಹನ ಸಾವರರು ಹಣ ಪಾವತಿ ಮಾಡುತ್ತಿರುವ ಕಾರಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರವನ್ನು ಶೇ.22ರಷ್ಟು ಹೆಚ್ಚಳ ಮಾಡಿರುವುದು ಅರಿವಿಗೆ ಬಂದಿಲ್ಲ.

ಈ ಹಿಂದೆ ಏಪ್ರಿಲ್ 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರವನ್ನು ಹೆಚ್ಚಳ ಮಾಡಿತ್ತು. ಆದ್ರೇ ಸಾರ್ವಜನಿಕರ
ಆಕ್ರೋಶದ ಹಿನ್ನಲೆಯಲ್ಲಿ, ದರ ಹೆಚ್ಚಳ ಆದೇಶವನ್ನು ವಾಪಾಸ್ಸು ಪಡೆದಿತ್ತು. ಆದ್ರೇ ಈಗ ಮತ್ತೆ ಜೂನ್ 1ರಿಂದ ಜಾರಿಗೆ ಬರುವಂತೆ ದರ ಹೆಚ್ಚಳ ಮಾಡಿದೆ.

ನೂತನ ಟೋಲ್ ದರ ಪಟ್ಟಿ

1) ವ್ಯಾನ್, ಕಾರು, ಜೀಪ್ ಗಳ ಏಕಮುಖ ಸಂಚಾರಕ್ಕೆ ಈ ಹಿಂದೆ ರೂ.135 ಇದ್ದ ದರವನ್ನು ರೂ.165ಕ್ಕೆ ಅಂದರೆ ರೂ.30 ಹೆಚ್ಚಳ

2) ಮಿನಿ ಬಸ್, ಲಘುವಾಹನಗಳ ಏಕ ಮುಖ ಟೋಲ್ ದರ ರೂ.220 ಇದ್ದದ್ದನ್ನು ರೂ.270ಕ್ಕೆ ಏರಿಸಿದೆ. ಅಂದರೆ ರೂ.50 ಹೆಚ್ಚಳ ಮಾಡಿದೆ.

3) ಬಸ್, ಟ್ರಕ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರದ ದರವನ್ನು ರೂ.460ರಿಂದ ರೂ.565ಕ್ಕೆ ಹೆಚ್ಚಳ ಮಾಡಿದೆ. ಅಂದರೆ ರೂ.105 ಹೆಚ್ಚಿಸಿದೆ.

4) ಮೂರು ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವನ್ನು ರೂ.500ರಿಂದ ರೂ.615ಕ್ಕೆ ಏರಿಸಿದೆ. ಅಂದರೆ ರೂ.115 ಹೆಚ್ಚಿಸಿದೆ.

5)ಭಾರೀ ವಾಹನಗಳ ಏಕಮುಖ ಸಂಚಾರ ದರ ರೂ.720ರಿಂದ ರೂ.885ಕ್ಕೆ ಹೆಚ್ಚಿಸಿದೆ. ಅಂದರೆ ರೂ.165 ಹೆಚ್ಚಳವಾದಂತೆ ಆಗಿದೆ.ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರ ಕಾರ್ಯಕ್ರಮ : ಸಿದ್ದತೆಗೆ ಕ್ರಮ ಜಿಲ್ಲಾ ಮಂತ್ರಿ ಸೂಚನೆ

6) 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಏಕಮುಖ ಸಂಚಾರ ದರವನ್ನು ರೂ.880ರಿಂದ ರೂ.1080ಕ್ಕೆ ಏರಿಕೆ ಮಾಡಿದೆ. ಅಂದರೆ ರೂ.200 ಹೆಚ್ಚಳ ಮಾಡಿದಂತೆ ಆಗಿದೆ.

Share This Article
Leave a comment