ನೀರನ್ನೂ ಭಿಕ್ಷೆ ಬೇಡುವ ಸ್ಥಿತಿ : ಮಂಡ್ಯದಲ್ಲಿ ರೈತರ ವಿನೂತನ ಪ್ರತಿಭಟನೆ

Team Newsnap
1 Min Read

ಮಂಡ್ಯ: ತಮಿಳುನಾಡಿಗೆ ಮತ್ತೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ನಿಯಂತ್ರಣ ಸಮಿತಿ ಸೂಚನೆ ಹಿನ್ನಲೆ ಮಂಡ್ಯದ ಸಂಜಯ್ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಪ್ರತಿಭಟನೆ ನಡೆಯಿತು.

ನ್ಯೂಸ್ನ್ಯಾಪ್ ಕನ್ನಡ ಪಾಡ್ಕ್ಯಾಸ್ಟ್

ಪ್ರತಿಭಟನಾಕಾರರ ತಂಡವೊಂದು ಭಿಕ್ಷಾ ಪಾತ್ರೆ ಹಿಡಿದು ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿ ಈಗ ನೀರು ಬಿಟ್ಟರೆ ರಾಜ್ಯ ರೈತರು ನೀರನ್ನೂ ಕೂಡ ಭಿಕ್ಷೆ ಬೇಡುವ ದುಸ್ಥಿತಿ ಬರುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಆಣೆಕಟ್ಟೆಯಿಂದ ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರು ಭಿಕ್ಷೆ ಎತ್ತಬೇಕಾಗುತ್ತೆ ಎಂದು ಅಣಕಿಸಿ  ಹರಿದ ಅಂಗಿ, ಚಡ್ಡಿ ಧರಿಸಿ, ಕೆಲವರು ಅರಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.ಕಾವೇರಿ ವಿವಾದ :ಇಂದು ರಾಜ್ಯ ಸರ್ಕಾರದಿಂದ ಸರ್ವಪಕ್ಷ ಸಭೆ

ರಾಜ್ಯ ಸರ್ಕಾರ ಈಗಾಗಲೇ ನಮ್ಮನ್ನು ಬೀದಿಗೆ ನಿಲ್ಲಿಸಿದೆ ಎಂದು ಕಿಡಿ ಕಾರಿದ ಪ್ರತಿಭಟನಾಕಾರರು, ‘ಕಾವೇರಿ ನಮ್ಮದು ಕಾವೇರಿ ನಮ್ಮದು’. ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಧಿಕ್ಕಾರ’ ಕೂಗಿದರು

Share This Article
Leave a comment