ಮಂಡ್ಯ – ರಾಜ್ಯ ಸರ್ಕಾರ ಮಂಗಳವಾರ ಮತ್ತೆ ಕೆಆರ್ ಎಸ್ ನಿಂದ 2171 ಕ್ಯುಸೆಕ್ ಹಾಗೂ ಕಬಿನಿ ಜಲಾಶಯದಿಂದ 1663 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಆರಂಭಿಸಿದೆ.
ಪ್ರಾಧಿಕಾರದ ಆದೇಶ ಪಾಲಿಸಿದ ನಂತರ ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಸಮಸ್ಯೆ ಹೇಳಿಕೊಳ್ಳುವುದು ಸುಲಭ ಎಂಬ ಮಾರ್ಗ ಕಂಡುಕೊಂಡ ರಾಜ್ಯ ಸರ್ಕಾರ ರೈತರ ವಿರೋಧದ ನಡುವೆಯೂ ನೀರು ಬಿಟ್ಟಿದೆ.
ಆಣೆಕಟ್ಟೆಗೆ ಈಗ 7000 ಕ್ಯುಸೆಕ್ ಒಳಹರಿವು ಇದೆ. ಮಂಡ್ಯ ಮೈಸೂರು ನಾಲೆಗಳಿಗೆ 3500 ಕ್ಯುಸೆಕ್ ಹರಿಸಲಾಗುತ್ತಿದೆ. ಆಣೆಕಟ್ಟೆ ನೀರಿನ ಮಟ್ಟ ಮಾತ್ರ 97 ಅಡಿಗೆ ಕುಸಿದಿದೆ.