17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !

Team Newsnap
1 Min Read
The seven-year-old sister who saved the little boy for 17 hours! 17 ಗಂಟೆಗಳ ಕಾಲ ಪುಟ್ಟ ಕಂದನನ್ನು ಕಾಪಾಡಿದ ಏಳು ವರ್ಷದ ಅಕ್ಕ !

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ನಂತರ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸಿದ್ದಾಳೆ

ಈ ಸಂಬಂಧಧ ಫೋಟೋ ನೆಟ್ಟಿಗರ ಮನಸ್ಸನ್ನು ಕರಗಿಸಿದೆ.ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ವಿಶ್ವಸಂಸ್ಥೆ ಪ್ರತಿನಿಧಿ ಮೊಹಮದ್ ಸಫಾ, ಇಬ್ಬರೂ 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಸಂಕಟದ ಪರಿಸ್ಥಿತಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.7 ನೇ ವೇತನ ಆಯೋಗ : ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಗಸೂಚಿ ಪ್ರಕಟ

ಮಂಗಳವಾರದಂದು ಸುಮಾರು 5,103 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು ಟರ್ಕಿ ಮತ್ತು ಸಿರಿಯಾದಲ್ಲಿ ವಿನಾಶವನ್ನು ಉಂಟುಮಾಡಿದ 7.8 ಭೂಕಂಪದಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ.

ಟರ್ಕಿಯ ದಕ್ಷಿಣ ಪ್ರದೇಶಗಳಲ್ಲಿ ಸೋಮವಾರ 7.6 ಮತ್ತು 6.0 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದವು. ನಂತರ ನಿನ್ನೆ (ಮಂಗಳವಾರ) 5.6 ತೀವ್ರತೆಗೂ ಹೆಚ್ಚಿನ ಭೂಕಂಪ ಆಗಿದೆ. ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲು ದೇಶಗಳು ಸ್ಪರ್ಧಿಸುತ್ತಿರುವಾಗ, ಟರ್ಕಿಯಲ್ಲಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.

Share This Article
Leave a comment