ಇಂದಿನಿಂದ ಪೋಲಿಸ್ ಸಿಬ್ಬಂದಿಗಳ ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಆರಂಭ

Team Newsnap
1 Min Read
34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಎಸ್ ಐ ಗಿಂತ ಕೆಳ ಹಂತದ ಪೊಲೀಸರು ಮತ್ತು ಆಡಳಿತ ಸಿಬ್ಬಂದಿಯ ಅಂತರ್ ಜಿಲ್ಲೆ ಘಟಕ ಹಾಗೂ ವಲಯ ವರ್ಗಾವಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ನಿಯಮಾನುಸಾರ ಇಂದಿನಿಂದ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಪೊಲೀಸರ ಅಂತರ ಜಿಲ್ಲಾ ಘಟಕ ವರ್ಗಾವಣೆಗೆ ಸಚಿವ ಸಂಪುಟದ ಅನುಮೋದನೆ ಬೆನ್ನಲ್ಲೇ ರಾಜ್ಯ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದೆ.

ಸಬ್ ಇನ್ಸ್ ಪೆಕ್ಟರ್, ಸಹಾಯಕ ಸಬ್ ಇನ್ಸ್ ಪೆಕ್ಟರ್, ಹೆಡ್ ಕಾನ್ ಸ್ಟೇಬಲ್, ಕಾನ್ ಸ್ಟೇಬಲ್, ಪ್ರಥಮ ದರ್ಜೆ ಸಹಾಯಕ ಹಾಗೂ ದಲಾಯತ್ ಗಳ ಅಂತರ್ ಜಿಲ್ಲೆ, ಘಟಕ, ಕಮಿಷನರೇಟ್ ಹಾಗೂ ವಲಯವಾರು ವರ್ಗಾವಣೆಗೆ ಆಯಾ ವಿಭಾಗದ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮಾ.5 ರಂದು ಕಾಂಗ್ರೆಸ್‍ಗೆ ಸೇರ್ಪಡೆ

1977 ರಿಂದ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ ನಿಯಮಗಳನ್ನು 2021 ರಲ್ಲಿ ನಾಗರಿಕ ಸೇವಾ ನಿಯಮಾವಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರವು ರದ್ದುಗೊಳಿಸಿತ್ತು. ನಂತರ ಪೊಲೀಸರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಹೀಗಾಗಿ ರಾಜ್ಯ ಸರ್ಕಾರವು ಮತ್ತೆ ಹಳೇ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ.

Share This Article
Leave a comment