ಅಂಗವಿಕಲರೊಬ್ಬರ ಆಧಾರ ಕಾರ್ಡ್ ಸಮಸ್ಯೆ 2 ವರ್ಷದಿಂದ ಸ್ಪಂದನೆ ಮಾಡದ ಮಂಡ್ಯ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿಗೆ ಪ್ರಧಾನಿ ಮೋದಿ ಕಾರ್ಯಾಲಯವು ಕೇವಲ ಎರಡೇ ದಿನ ಸ್ಪಂದನೆ ಮಾಡಿ ತಂಡಸನಹಳ್ಳಿ ನೂತನ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಮಂಡ್ಯದ ಅಂಗವಿಕಲ ನೂತನ್ ಆಧಾರ್ ಸಮಸ್ಯೆಯಿಂದಾಗಿ ಸರ್ಕಾರಿ ಸೌಲಭ್ಯಗಳಿಂದ ವಂಚಿತನಾಗಿದ್ದರು. ಚರ್ಮ ಕಾಯಿಲೆಯಿಂದ ಆಧಾರ್ ಕಾರ್ಡ್‌ನಿಂದ ವಂಚಿನಾಗಿದ್ದ ನೂತನ್ ಗೆ ಈ ಹಿಂದೆ ಮಾಡಿಸಿದ್ದ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗದಿರೋದ್ರಿಂದ ಬ್ಲಾಕ್ ಆಗಿತ್ತು. ಮತ್ತೆ ಆಕ್ಟೀವ್ ಮಾಡಿಸಲು ಸಮಸ್ಯೆಯಾಗಿದ್ದು ಈ ಚರ್ಮ ಕಾಯಿಲೆ.
ಬಯೋಮೆಟ್ರಿಕ್ ಆತನ ಗುರುತು ತೆಗೆದುಕೊಳ್ಳುತ್ತಿರಲಿಲ್ಲ, ಕಣ್ಣಿನ ಸ್ಕ್ಯಾನ್ ಆಗಿರಲಿಲ್ಲ. ಸಮಸ್ಯೆ ಪರಿಹರಿಸುವಂತೆ ಮಂಡ್ಯ ಡಿಸಿ, ಸಂಸದೆ ಸುಮಲತಾಗೆ ಮನವಿ ನೀಡಿದರೂ ಯಾವ ಪರಿಹಾರವೂ ಸಿಗಲಿಲ್ಲ.
ಆಗ ಈ ನೂತನ್ ರೈತ ಮುಖಂಡ ಮಧುಚಂದನ್ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ನೂತನ್ ಅಕ್ಕ ಸಂಧ್ಯಾ ನರೇಂದ್ರ ಮೋದಿಗೆ ಪತ್ರ ಬರೆದು, ಪ್ರಧಾನಿ ಕಚೇರಿಗೆ ಮಧುಚಂದನ್ ಟ್ಯಾಗ್ ಮಾಡಿದ್ದರು.
ಇದನ್ನು ಓದಿ – ಸಂಸದೆ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ – ಸಚಿವ ನಾರಾಯಣಗೌಡ
ಟ್ವೀಟ್ ಮಾಡಿದ ಒಂದೇ ದಿನಕ್ಕೆ ಅಧಿಕಾರಿಗಳಿಂದ ನೂತನ್ ಗೆ ಫೋನ್ ಕರೆ, ಎರಡನೇ ದಿನವೇ ಆಧಾರ್ ಕಾರ್ಡ್ ಆಕ್ಟೀವ್ ಆಗಿದೆ
ಸಮಸ್ಯೆ ಪರಿಹಾರದ ಬಳಿಕ ನರೇಂದ್ರ ಮೋದಿ, ರೈತ ಮುಖಂಡ ಮಧುಚಂದನ್ ಗೆ ನೂತನ್ ಕುಟುಂಬ ಧನ್ಯವಾದ ಹೇಳಿದೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ