ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ತಾನು ಎರಡನೇ ಪತ್ನಿ ಎಂದು ಗೊತ್ತಾಗಿ ನವವಧು ಗೌತಮಿ (24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬೆಂಗಳೂರಿನ ಮಾತರಹಳ್ಳಿಯ ಕಾವೇರಿ ಲೇಔಟ್ ನಲ್ಲಿ ನಡೆದಿದೆ.
ಈ ಘಟನೆ ಸಂಬಂಧ ಗೌತಮಿ ತಂದೆ ಬಾನು ನೀಡಿದ ದೂರಿನನ್ವಯ ಮಾರತಹಳ್ಳಿ ಪೊಲೀಸರು ಪತಿ ಪ್ರಸಾದ್ ಹಾಗೂ ಆತನ ಮೊದಲ ಪತ್ನಿ ಆಯಿಷಾ ಬಾನು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಕಾಂ ಓದಿರುವ ಗೌತಮಿ ಪುಂಗನೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಳು. ಈ ಸಂದರ್ಭದಲ್ಲಿ ಈಕೆಗೆ ಪ್ರಸಾದ್ ಮೇಲೆ ಲವ್ಆಗಿದೆ. ಪರಿಣಾಮ ಆಕೆ ಅವನ ಜೊತೆ ಓಡಿ ಹೋಗಿದ್ದಾಳೆ. ಬಳಿಕ 2022ರ ಮಾರ್ಚ್ 19ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. PSI ಹುದ್ದೆ : ಮರು ಪರೀಕ್ಷೆಗೆ ಹೈಕೋರ್ಟ್ ತಡೆ – ಪೌಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಮಗಳು ಓಡಿ ಹೋದ ಸಂದರ್ಭದಲ್ಲಿ ಮಗಳು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಆದರೆ ಆಕೆ ಪೊಲೀಸರ ಮುಂದೆ ಹಾಜರಾಗಿ ತಾನು ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು. ನಂತರ ದಂಪತಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಪ್ರಸಾದ್ ಹಾಗೂ ಬಾನುಗೆ ಈಗಾಗಲೇ ಓರ್ವ ಮಗಳಿರುವುದಾಗಿ ಗೌತಮಿಗೆ ಗೊತ್ತಾಗಿದೆ. ಮಂಗಳವಾರ ತಂದೆ ಬಾಬುಗೆ ಕರೆ ಮಾಡಿದ ಗೌತಮಿ, ಬಾನು ಮನೆಗೆ ಬಂದಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ತಾನು ಬಾನು ಯಾಕೆ ಮನೆಗೆ ಬರುವುದು ಎಂದು ಪ್ರಶ್ನೆ ಮಾಡಿದೆ. ಈ ವೇಳೆ ಇಬ್ಬರೂ ಸೇರಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಿರುಕುಳ ನೀಡಿದ್ದಾರೆ ಎಂದು ಗೌತಮಿ ಹೇಳಿಕೊಂಡಿರುವುದಾಗಿ ಬಾಬು ಪೊಲೀಸರಿಗೆ ತಿಳಿಸಿದ್ದಾರೆ.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ